maxresdefault

ಸಾನಾ(ಯೆಮನ್): ಭೀಕರ ಕಾರ್ ಬಾಂಬ್ ದಾಳಿ ಯಲ್ಲಿ 11 ಮಂದಿ  ಮೃತಪಟ್ಟಿರುವ ಘಟನೆ ಅರಬ್ ರಾಷ್ಟ್ರ ಯೆಮನ್ ನ ಶಾಬ್ವಾ ದ ರಾಜಧಾನಿ ಅಟಾಖ್ ನಲ್ಲಿರುವ ಮಿಲಿಟರಿ ಚೆಕ್ ಪಾಯಿಂಟ್ ನಲ್ಲಿ ಮಂಗಳವಾರ ಸಂಭವಿಸಿದೆ.

ಈ ಮಿಲಿಟರಿ ಚೆಕ್ ಪಾಯಿಂಟಿಗೆ ಬಂದ ಗನ್ ಮ್ಯಾನ್ ಓರ್ವ ಇದ್ದಕ್ಕಿದ್ದಂತೆ ಗುಂಡು ಹಾರಿಸಿ ಬಳಿಕ ಬಾಂಬ್ ಇದ್ದ ಕಾರನ್ನು ಚೆಕ್ ಪಾಯಿಂಟ್ ಒಳಗೆ ನುಗ್ಗಿಸಿ ಸ್ಫೋಟಗೊಳಿಸಿದ್ದು, ಪರಿಣಾಮ 11 ಮಂದಿ ಮೃತರಾಗಿದ್ದಾರೆ. ಅಲ್ಲದೆ, ಇನ್ನೂ  ಹಲವರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

By Suddi9

Leave a Reply

Your email address will not be published. Required fields are marked *