gang-rape

ಬೆಳಗಾವಿ:  ಕಡಲೇ ಕಾಯಿ ಕೊಡಿಸುವುದಾಗಿ ಆಸೆ ತೋರಿಸಿ ಐದು ವರ್ಷದ ಬಾಲಕಿ ಮೇಲೆ ಬಾಲಕನೋರ್ವ ಅತ್ಯಾಚಾರ ಎಸಗಿದ ಅಮಾನುಷ ಘಟನೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ನಾಗನೂರು ಗ್ರಾಮಕ್ಕೆ ರಸ್ತೆ ಕಾಮಗಾರಿಗಾಗಿ ಬಂದಿದ್ದ 15 ವರ್ಷದ ಗದಗ ಜಿಲ್ಲೆಯ ಹೊಸಳ್ಳಿ ಮೂಲದ  ಬಾಲಕ ಓರ್ವ ಬಾಲಕಿಯನ್ನು ಪುಸಲಾಯಿಸಿ ಹೊಲಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ನೇಸರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *