99

ತುಮಕೂರು: ಇತ್ತೀಚೆಗೆ ಅನಾರಗ್ಯದಿಂದ ಬಳಲುತ್ತಿದ್ದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮಂಗಳವಾರ ಮಠಕ್ಕೆ ಭೇಟಿ ನೀಡಿದ್ದಾರೆ.

ಅಣ್ಣಾ ಹಜಾರೆ ಅವರು  ದೊಡ್ಡಬಳ್ಳಾಪುರದಿಂದ ಮಠಕ್ಕೆ ಭೇಟಿ ನೀಡಿ, ‘ಸ್ವಾಮೀಜಿ ಜೀವನ ದೀಪ ಇದ್ದಂತೆ. ಸದಾ ಪ್ರಜ್ವಲಿಸುತ್ತಲೇ ಇರುತ್ತದೆ. ಇಂತಹ ಮಹಾ ಪುರುಷರನ್ನು ನೋಡಿ ಬಹಳ ಸಂತೋಷವಾಯಿತು. ಮಾನವನ ಸೇವೆಯೇ ಮಾಧವನ ಸೇವೆ ಇದ್ದಂತೆ. ಅದರಂತೆ ಬಡವರ ಏಳಿಗೆಗೆ ಕೆಲಸ ಮಾಡುತ್ತಿರುವ ಸ್ವಾಮೀಜಿ ಅವರಿಂದ ಇಡಿ ಜಗತ್ತಿಗೆ ಒಳಿತಾಗುತ್ತಿದೆ’ ಎಂದು ತಿಳಿಸಿದರು.

By suddi9

Leave a Reply

Your email address will not be published. Required fields are marked *