ತಮಿಳುನಾಡು: ಕಾರಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ಹೊಸೂರು ಸಮೀಪದ ತಮಿಳು ನಾಡಿನ ಸೂಳಗಿರಿ ರಾಷ್ಟ್ರೀಯ ಹೆದ್ದಾರಿ(7) ಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತರನ್ನು ಬೆಂಗಳೂರಿನ ಆರ್.ಟಿ. ನಗರ ನಿವಾಸಿಗಳಾದ ಅಂಬುಜಮ್ಮ(50) ಪತಿ ರಾಮಚಂದ್ರ (74) ಹಾಗೂ ಲಾರಿ ಚಾಲಕ ಕುಮಾರ್(30) ಎಂದು ಗುರುತಿಸಲಾಗಿದೆ.
ಅಂಬುಜಮ್ಮ(50) ಪತಿ ರಾಮಚಂದ್ರ ವೃತ್ತಿಯಲ್ಲಿ ವೈದ್ಯರಾಗಿದ್ದು, ತಮಿಳುನಾಡಿನ ದೇವಾಲಯಕ್ಕೆ ಕಾರಿನಲ್ಲಿ ತೆರಳಿ ವಾಪಸ್ ಬರುತ್ತಿದ್ದ ವೇಳೆ ಸೊಳಗಿರಿಯಲ್ಲಿ ಕಾರಿನ ಹಿಂಬದಿಗೆ ಲಾರಿಯೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಈ ಅಪಘಾತ ನಡೆದಿದೆ. ಅಲ್ಲದೆ, ಲಾರಿಯ ಚಾಲಕ ಕುಮಾರ್ ಕೂಡ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಸೂಳಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

