ಬಂಟ್ವಾಳ:  ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಮುಂಭಾಗದಲ್ಲಿ ‌ಶೀಟಿನ ಮೇಲ್ಛಾವಣಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡಲಾದ ಮೂರು ಲಕ್ಷ ರೂ.ಗಳ ಆರ್ಥಿಕ ನೆರವನ್ನು ಸೋಮವಾರ ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು. 

ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್ ಅವರು ನೆರವಿನ ಡಿಡಿಯನ್ನು ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರಿಗೆ ಹಸ್ತಾಂತರಿಸಿದರು. ಯೋಜನೆಯ ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಪಿ., ಕೃಷಿ ಮೇಲ್ವಿಚಾರಕ ಭಾಸ್ಕರ್,  ದೇವಸ್ಥಾನದ ಪ್ರಮುಖರಾದ ವಿಠಲ್ ಎಂ.ಆರುಮುಡಿ, ಕುಸುಮಾಕರ ಶೆಟ್ಟಿ ಕೂರ್ಯಾಳ, ರಾಧಾಕೃಷ್ಣ ರೈ ಕೊಟ್ಟುಂಜ, ಯೋಜನೆಯ ಸರಪಾಡಿ ಒಕ್ಕೂಟದ ಪ್ರಮುಖರಾದ ಪುರುಷೋತ್ತಮ ಪೂಜಾರಿ ಮಜಲು, ಗಿರೀಶ್ ನಾಯ್ಕ್ ನೀರಪಲ್ಕೆ, ಹರೀಶ್ ನಾಯ್ಕ್, ಧನಂಜಯ ಶೆಟ್ಟಿ ಹಂಚಿಕಟ್ಟೆ ಮೊದಲಾದವರಿದ್ದರು.

By Suddi9