ಬಂಟ್ವಾಳ :ಬಡಗಕಜೆಕಾರು ದ.ಕ.ಜಿ.ಪ.ಉ.ಹಿ.ಪ್ರಾಥಮಿಕ ಶಾಲೆಯಲ್ಲಿ ಕೆ.ವೈ.ಪೂಜಾರಿ ಕುಟುಂಬಿಕರ ವತಿಯಿಂದ ಮೂರುದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಚಾಲನೆ ನೀಡಲಾಯಿತು

ಉಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ನಿವೃತ್ತ ವಿಂಗ್ ಕಮಾಂಡರ್ ಕರುಣಾಮಯಿ ಕಜೆಕಾರು ಉಪಸ್ಥಿತರಿದ್ದರು.
ಮೊದಲ ದಿನದಲ್ಲಿ ಟಿಜಿಟಿ ಶಿಕ್ಷಕ ಹರೀಶ ಮೂಲ್ಯರವರು ಭಾಷಣ ಕಲೆ ಹಾಗೂ ಆಟಿಕೆಯಲ್ಲಿ ವಿಜ್ಞಾನ ಎಂಬ ವಿಷಯಗಳನ್ನು ಮಂಡಿಸಿದರು.ಪವಿತ್ರ ಬಿ.ಕೆ ರವರು ರಂಗೋಲಿ ಬಿಡಿಸುವ ಬಗ್ಗೆ ಹಾಗೂ ಪೂರ್ಣಿಮಾ ರವರು ನೃತ್ಯಭರಿತ ಹಾಡುಗಳನ್ನು ಕಲಿಸಿದರು.
ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು.ಗೌರವ ಶಿಕ್ಷಕಿ ರೂಪಾ ವಂದಿಸಿದರು.ಗೌರವ ಶಿಕ್ಷಕಿ ಪವಿತ್ರ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.
