ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಡಾ. ಎಸ್ .ಎಲ್ ಭೈರಪ್ಪ ಪ್ರತಿಷ್ಠಾನ (ರಿ) ಬೆಂಗಳೂರು ಇದರ ಸಹಯೋಗದಲ್ಲಿ ಪದ್ಮಭೂಷಣ ಡಾ. ಎಸ್ ಎಲ್ ಭೈರಪ್ಪನವರ ಪ್ರಥಮ ಪುಣ್ಯಸ್ಮರಣೆಯ ಪ್ರಯುಕ್ತ  “ಡಾ. ಎಸ್ ಎಲ್ ಭೈರಪ್ಪ- ಒಂದು ನೆನಪು” ವಿಶೇಷ ಉಪನ್ಯಾಸ ಕಾರ್ಯಕ್ರಮ ಶುಕ್ರವಾರ ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯ ಶಂಕರಾಚಾರ್ಯ ಸಭಾಂಗಣದಲ್ಲಿ ನಡೆಯಿತು.
ಶಿಕ್ಷಣ ತಜ್ಞರು,ಬೆಂಗಳೂರು ಸೃಜನಶೀಲ ಅಧ್ಯಾಪನಕೇಂದ್ರದ ಮುಖ್ಯಸ್ಥರಾದ ಡಾ. ಗುರುರಾಜ ಕರಜಗಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ  ಶಿಕ್ಷಕರಿಗಾಗಿ “ಶಿಕ್ಷಕನ ಮನೋಭೂಮಿಕೆ” ಹಾಗೂ ವಿದ್ಯಾರ್ಥಿಗಳಿಗಾಗಿ” ವಿದ್ಯಾರ್ಥಿ ಜೀವನವೊಂದು ಸಾಧನಾಪಥ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
 
 ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 
ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತಮಾಧವ ಅವರು ಉಪಸ್ಥಿತರಿದ್ದರು.
ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ  ಸ್ವಾಗತಿಸಿದರು. ಪ್ರಾಥಮಿಕ ವಿಭಾಗದ ಪ್ರೀತ ಮಾತಾಜಿ ಅವರು ಕಾರ್ಯಕ್ರಮ ನಿರೂಪಿಸಿ,ಕೊನೆಯಲ್ಲಿ ವಂದಿಸಿದರು

By Suddi9

Leave a Reply

Your email address will not be published. Required fields are marked *