ಹಾವೇರಿ: ದೇಶದ ಸಂವಿಧಾನವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಅದೊಂದು ಅವಿವೇಕತನಕ ಮಾತು. ಹಾಗೇ ಮಾತನಾಡುವ ಮೂಲಕ ದೇಶವನ್ನು ಸರ್ವಾಧಿಕಾರಿಯತ್ತ ಕೊಂಡೊಯ್ಯಲು ಹೊರಟಿದ್ದಾರೆ ಎಂದು ಅಣ್ಣಾ ಹಜಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಜಿಲ್ಲೆಯ ಬ್ಯಾಡಗಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಂವಿಧಾನದ ಬಗ್ಗೆ ಅಪಸ್ವರ ವ್ಯಕ್ತಪಡಿಸುವ ಮೂಲಕ ದೇಶ ಹಂತ-ಹಂತವಾಗಿ ಸರ್ವಾಧಿಕಾರಿಯತ್ತ ಸಾಗುತ್ತಿದೆ ಎಂದು ಹೋರಾಟಗಾರ ಅಣ್ಣಾ ಹಜಾರೆ ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ರೈತರಿಗೆ ಸರಿಯಾದ ಬೆಲೆ ಸಿಗದೇ ರೈತರು ಕಂಗಾಲ ಆಗಿದ್ದಾರೆ. ಇದರಿಂದ ೧೨ ಸಾವಿರ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರ ರೈತರ ನೇರವಿಗೆ ಬಂದಿಲ್ಲ ಎಂದು ದೂರಿದ ಅವರು, ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಮಾರ್ಚ್ ೨೮ ರಿಂದ ಹೋರಾಟ ಆರಂಭಿಸಲಾಗುವದು. ಈ ಹೋರಾಟಕ್ಕೆ ದೇಶದ ನಾನಾ ಭಾಗದಿಂದ ಸಾವಿರಾರು ಜನರು ಭಾಗಿಯಾಗುವರು ಎಂದು ತಿಳಿಸಿದರು.

