ಸುದ್ದಿ9 ಕೈಕಂಬ: ಶ್ರೀಕ್ಷೇತ್ರ ನೆಲ್ಲಿತೀರ್ಥ ಶ್ರೀ ಸೋಮನಾಥೇಶ್ವರ ಗುಹಾಲಯ ಇದರ ಬ್ರಹ್ಮಕಶೋತ್ಸವವನ್ನು ಬರುವ ಎಪ್ರಿಲ್ 6ರಂದು ನಡೆಸುವುದಾಗಿ ಆಡಳಿತ ಮಂಡಳಿ ನಿರ್ಧರಿಸಿದೆ. ಈ ಸಂದರ್ಭದಲ್ಲಿ ಬಿ. ನಾಗರಾಜ ಶೆಟ್ಟಿಯವರ ನೇತೃತ್ವದಲ್ಲಿ ನಾಗಮಂಡಲೋತ್ಸವ ನಡೆಸಲು ತೀಮರ್ಾನಿಸಲಾಗಿದೆ.
ಈ ಪುಣ್ಯಕಾರ್ಯಗಳ ಪೂರ್ವತಯಾರಿಯ ಕುರಿತು ಚಚರ್ಿಸಲು ಭಕ್ತಾದಿಗಳ ಸಭೆಯನ್ನು ದಿನಾಂಕ 10.2.2014ರಂದು ಸೋಮವಾರ ಸಾಯಂಕಾಲ 4 ಗಂಟೆಗೆ ಬಿ. ನಾಗರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ದೇವಸ್ಥಾನದ ಜೀಣರ್ೋದ್ಧಾರ ಸಮಿತಿ ಅಧ್ಯಕ್ಷರಾದ ಧರ್ಮದಶರ್ಿ ಶ್ರೀ ಹರಿಕೃಷ್ಣ ಪುನರೂರು, ಸಮಿತಿಯ ಪ್ರಧಾನ ಕಾರ್ಯದಶರ್ಿ ಶ್ರೀ ಎನ್. ವಿ.ಜಿ.ಕೆ ಭಟ್, ವ್ಯವಸ್ಥಾಪನಾ ಅಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ ತಿಳಿಸಿದ್ದಾರೆ
