ಸುದ್ದಿ9 ಕೈಕಂಬ: ಶ್ರೀ ಮಹಮ್ಮಾಯಿ ಭಕ್ತವೃಂದ ಮೊಗರು, ಕುಕ್ಕಟ್ಟೆ ಹಾಗೂ ಎ.ಜೆ ವೈದ್ಯಕೀಯ ಮತ್ತು ದಂತ ಮಹಾವಿದ್ಯಾಲಯ ಮಂಗಳೂರು ಇವರ ಜಂಟಿ ಸಹಯೋಗದಲ್ಲಿ ದಿನಾಂಕ 9-2 2014ರಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಮೊಗರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಮತ್ತು ದಂತ ಶಿಬಿರ ನಡೆಯಲಿರುವುದು.
ಈ ವೇಳೆ ಉಚಿತ ವೈದ್ಯಕೀಯ ತಪಾಸಣೆ, ಇಸಿಜಿ, ಉಚಿತ ಅಲ್ಟ್ರಾಸೌಂಡ್ ಹಾಗೂ ಉಚಿತ ಔಷಧಿ ವಿತರಣೆ ನಡೆಸಲಾಗುವುದು. ಅವಶ್ಯಕತೆ ಕಂಡು ಬಂದವರಿಗೆ ರೋಟರಿ ಕ್ಲಬ್, ಬೈಕಂಪಾಡಿ ವತಿಯಿಂದ ಉಚಿತ ಕನ್ನಡಕ ವಿತರಿಸಲಾಗುವುದು.
