bhaskar
ರಂಗಕಮರ್ಿ,ಯಕ್ಷಗಾನ ಸಂಘಟಕ, ನಾಟಕ ಕಲಾವಿದ, ಕಿರುತೆರೆ ನಟ, ಅಂಕಣಕಾರ, ಸಾಹಿತಿ ಭಾಸ್ಕರ ನೆಲ್ಲಿತೀರ್ಥ(45) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು. ಸ್ಥಳೀಯವಾಗಿ ಜನಮನ್ನಣೆಗಳಿಸಿದ್ದ ಭಾಸ್ಕರ್ ಅವರು ತುಳು ಹಾಗೂ ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದು, ಇವುಗಳಲ್ಲಿ “ತೂಂಟಾನ್” ಪ್ರಸಿದ್ಧ ಕೃತಿ. ಮುಂದಿನ ದಿನಗಳಲ್ಲೂ ದೇವಸ್ಥಾನದಲ್ಲಿ ಹಲವು ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ಮೃತರು ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದರು. ಕುದುರೆಮುಖ ಅದಿರು ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಭಾಸ್ಕರ ಅವರು, “ಸಹ್ಯಾದ್ರಿ ಮಡಿಲ ತಂಡ” ಎಂಬ ರಂಗ ತಂಡವನ್ನು ಮುನ್ನಡೆಸಿಕೊಂಡು 50ಕ್ಕೂ ಹೆಚ್ಚು ವಿಭಿನ್ನ ನಾಟಕಗಳನ್ನು ನಿದರ್ೇಶಿಸಿದ್ದರು. ಕಳೆದ ವರ್ಷ 8-15 ವರ್ಷದ ಒಳಗಿನ ಮಕ್ಕಳಿಗೆ ನೆಲ್ಲಿತೀರ್ಥದಲ್ಲಿ ಯಕ್ಷಗಾನ ತರಬೇತಿಯನ್ನು ನೀಡಿ ಅವರಲ್ಲಿರುವ ಕಲಾ ಪ್ರತಿಭೆಯನ್ನು ಅನಾವರಣಗೊಳ್ಳುವಲ್ಲಿ ಶ್ರಮಿಸಿದ್ದರು.
ಇವರ ನಿಧನದಿಂದ ನೆಲ್ಲಿತೀರ್ಥ ದೇವಸ್ಥಾನಕ್ಕೆ ಹಾಗೂ ಗ್ರಾಮಕ್ಕೆ ತುಂಬಲಾಗದ ನಷ್ಟವಾಗಿದೆ. ದೇವಸ್ಥಾನದ ಜಿಣರ್ೋದ್ಧಾರ ಸಮಿತಿ ಅಧ್ಯಕ್ಷ ಧರ್ಮದಶರ್ಿ ಶ್ರೀ ಹರಿಕೃಷ್ಣ ಪುನರೂರು, ಪ್ರಧಾನ ಕಾರ್ಯದಶರ್ಿ ಎನ್.ವಿ.ಜಿ.ಕೆ.ಭಟ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಬ್ರಾಯ ಭಟ್, ಬಾಲಕೃಷ್ಣ ಕತ್ತಲ್ಸಾರ್ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

By suddi9

Leave a Reply

Your email address will not be published. Required fields are marked *