
ಸುದ್ದಿ9 ಮಂಗಳೂರು: ನಗರ ಮಧ್ಯದ ವಾಹನ ದಟ್ಟನೆ ಹಾಗೂ ಜನನಿಬಿಡತೆಯ ಕಾರಣದಿಂದ ನಗರದ ಹೃದಯ ಭಾಗದಲ್ಲಿರುವಲ್ಲಿ ವೆನ್ಲಾಕ್ ಆಸ್ಪತ್ರೆಯನ್ನು ಹೊರವಲಯದ
ವಿಶಾಲ ಪ್ರದೇಶಕ್ಕೆ ಸ್ಥಳಾಂತರಿಸಿದರೆ ಉತ್ತಮ ಎಂಬ ಪ್ರಸ್ತಾಪ ಗುರುವಾರ ಜಿಲ್ಲಾ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಚಚರ್ೆ ಸಮಯ ಕೇಳಿಬಂತು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಮೂರು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, ಮಳೆಗಾಲದಲ್ಲಿ ಮೇಲ್ಚಾವಣಿ ಸೋರುತ್ತಿದೆ. ಜೈಲು ವಾಡರ್್ ಕುಸಿಯುವ ಭೀತಿಯಲ್ಲಿದೆ, ಮೆಡಿಸಿನ್ ವಾಡರ್್ ಪರಿಸ್ಥಿತಿಯೂ ಚೆನ್ನಾಗಿಲ್ಲ ಎಂದು ವೆನ್ಲಾಕ್ ವೈದ್ಯಾಧಿಕಾರಿ ಡಾ.ರಾಜೇಶ್ವರೀ ದೇವಿ ಸಚಿವರ ಗಮನ ಸೆಳೆದರು. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ವಿಷಯ ಮುಂದುವರಿಸಿ ವೆನ್ಲಾಕ್ ಆಸ್ಪತ್ರೆ ಕಟ್ಟಡ ಹಳೆಯದಾಗಿ ಶಿಥಿಲವಾಗಿದೆ. ಅದನ್ನು ಎಷ್ಟು ದುರಸ್ತಿ ಮಾಡಿದರೂ ಅಷ್ಟೇ. ಅದ್ದರಿಂದ ಭವಿಷ್ಯದ ಹಿತದೃಷ್ಟಿಯಿಂದ ನಗರದ ಹೊರವಲಯದಲ್ಲಿ ಕನಿಷ್ಟ 25 ಎಕರೆ ವಿಶಾಲ ಸ್ಥಳ ಗುರುತಿಸಿ ಸ್ಥಳಾಂತರ ಮಾಡಿದರೆ ಉತ್ತಮ. ಅಲ್ಲಿ ವೈದ್ಯಕೀಯ ಕಾಲೇಜು ಕೂಡ ಸ್ಥಾಪಿಸಿದರೆ ಬಡ, ಮಧ್ಯಮ ವರ್ಗದ ವಿದ್ಯಾಥರ್ಿಗಳಿಗೂ ಅನುಕೂಲ ಆಗಲಿದೆ ಎಂದರು.
ಮಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಾ ಸಾಗಿದೆ, ಇನ್ನೊಂದು ಕಡೆಯಲ್ಲಿ ವಾಹನ ದಟ್ಟೆಣೆ ಕೂಡಾ ಮಿತಿ ಮೀರುತ್ತಿದೆ. ಈ ವಾತಾವರಣ ರೋಗಿಗಳಿಗೆ ಪೂರಕವಾಗಿಲ್ಲ. ಹೊರ ಪ್ರದೇಶದಲ್ಲಿ ಆಸ್ಪತ್ರೆ ನಿಮರ್ಿಸಿದರೆ ಆರೋಗ್ಯಕರ ವಾತಾವರಣ ಸಿಗಬಹುದು. ವೆನ್ಲಾಕ್ ಆಸ್ಪತ್ರೆಯನ್ನು ಆಸುಪಾಸಿನ 7-8 ಜಿಲ್ಲೆಗಳ ಜನರು ಆಶ್ರಯಿಸಿದ್ದಾರೆ. ಇದೊಂದು ಪ್ರಾದೇಶಿಕ ಆಸ್ಪತ್ರೆಯಾಗಿ ಮಾರ್ಪಟ್ಟಿದೆ ಎಂದು ರಾಜೇಶ್ವರೀ ಹೇಳಿದರು. ಆರೋಗ್ಯ ಸಚಿವ ಯು.ಟಿ ಖಾದರ್ ಅವರ ಜತೆ ಚಚರ್ಿಸಿ ವೆನ್ಲಾಕ್ ಆಸ್ಪತ್ರೆ ಸ್ಥಳಾಂತರ ಅಥವಾ ನವೀಕರಣ ಬಗ್ಗೆ ಮಾಸ್ಟರ್ ಪ್ಲಾನ್ ರೂಪಿಸಿ, ಜನರಿಗೆ ಉತ್ತಮ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಸಚಿವರು ಹೇಳಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಜಿಲ್ಲಾ ಪೊಲೀಸ್ ಅಧೀಕ್ಷಕ ಶಂತನು ಸಿನ್ಹ ಉಪಸ್ಥಿತರಿದ್ದರು.
