ಮುಂಬಯಿ: ರೋಹನ್ ಕಾರ್ಪೋರೇಶನ್ ಸಿಎಸ್ ಆರ್ ನಿಧಿಯಿಂದ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ೧೦ಲಕ್ಷ ಮೌಲ್ಯದ ಮಲ್ಟಿಪ್ಯಾರ ಮಾನಿಟರ್ ಕೊಡುಗೆಯನ್ನು ರೋಹನ್ ಕಾರ್ಪೊ ರೇಷನ್ ನ ಅಧ್ಯಕ್ಷ ಡಾ.ರೋಹನ್ ಮೊಂತೆರೊ ಅವರು ವೆನ್ಲಾಕ್ ವೈದ್ಯಕೀಯ ಅಧೀಕ್ಷಕ ಡಾ.ಶಿವಪ್ರಕಾಶ್ ಅವರಿಗೆ ಹಸ್ತಾಂತರಿಸಿದರು.

ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಅವರು ಮುಖ್ಯ ಅತಿಥಿsಯಾಗಿ ಭಾಗವಹಿಸಿ ಮಾತನಾಡುತ್ತಾ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ರೋಹನ್ ಮೊಂತೆರೊ ಮಂಗಳೂರು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ತಮ್ಮಬದ್ಧತೆ, ಪರಿಶ್ರಮದಿಂದ ಮಹತ್ವದ ಸಾಧನೆ ಮಾಡಲು ಸಾಧ್ಯವಾಗಿದೆ.ಬಡವರಲ್ಲಿ ಬಡವರಿಗೆ ನೆರವಾಗುತ್ತಿರುವ ವೆನ್ಲಾಕ್ ಆಸ್ಪತ್ರೆಗೆ ಅಗತ್ಯ ಸಲಕರಣೆಗಳನ್ನು ಒದಗಿಸಲು ರೋಹನ್ ಮೊಂತೆರೊ ತಮ್ಮ ಆದಾಯದ ಪಾಲನ್ನು ಸಿಎಸ್ ಆರ್ ಮೂಲಕ ನೆರವಾಗುತ್ತಿರುವುದು ಶ್ಲಾಘನೀಯ ಎಂದರು.
ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಿವಪ್ರಕಾಶ್ ಮಾತನಾಡುತ್ತಾ, ವೆನ್ಲಾಕ್ ಆಸ್ಪತ್ರೆಗೆ ಸುಮಾರು ೧೦ಲಕ್ಷ ರೂವೆಚ್ಚದ ಮಲ್ಟಿಪ್ಯಾರ ಮಾನಿಟರ್ ಒದಗಿಸಿರುವುದರಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಅನುಕೂಲ ವಾಗಲಿದೆ.ಈ ಹಿನ್ನೆಲೆಯಲ್ಲಿ ರೋಹನ್ ಕಾರ್ಪೊರೇಷನ್‌ಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ರೋಹನ್ ಕಾರ್ಪೊರೇಷನ್‌ನ ಅಧ್ಯಕ್ಷ ಡಾ| ರೋಹನ್ ಮೊಂತೆರೊ, ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ಬಡವರಿಗೆ ಆರೋಗ್ಯ ಸೌಲಭ್ಯಗಳನ್ನು ನೀಡುತ್ತಿರುವ ವೆನ್ಲಾಕ್ ಆಸ್ಪತ್ರೆಗೆ ಮಲ್ಟಿಪ್ಯಾರ ಮಾನಿಟರ್ ಒದಗಿಸಿರುವುದರಿಂದ ಬಡ ರೋಗಿಗ ಳಿಗೆ ಸಹಾಯವಾಗಲಿದೆ ಎಂದರು. ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೋನ್ ಮೊಂತೆರೊ ವಂದಿಸಿದರು. ಸಾಹಿಲ್ ಝಾಹಿರ್ ಕಾರ್ಯಕ್ರಮ ನಿರೂಪಿಸಿದರು.
