ಪಿಲಿಕುಳ ನಿಸರ್ಗಧಾಮ ರೆಸಾಟರ್್, ಆಯುವರ್ೆದ ಕೇಂದ್ರ, ಪಕ್ಷಿಧಾಮ ಉದ್ಘಾಟನೆ.
ಸುದ್ದಿ9 ಕೈಕಂಬ;
ಕೇಂದ್ರ ಸಕರ್ಾರ ಸಿಆರ್ಝಡ್ ನೀತಿಯಲ್ಲಿ ಸಡಿಲಿಕೆ ಮಾಡಿದರೆ ಕರಾವಳಿ ಕನರ್ಾಟಕದ ಬೀಚ್ನ 320 ಕಿ.ಮೀ ಉದ್ದದಲ್ಲಿ 42 ಬೀಚ್ ಹಾಗು 4 ದ್ವೀಪಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವ ಆರ್.ವಿ.ದೇಶ್ಪಾಂಡೆ ತಿಳಿಸಿದ್ದಾರೆ.
ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ನಿಮರ್ಿಸಿದ ಪಿಲಿಕುಳ ನಿಸರ್ಗಧಾಮ ರೆಸಾಟರ್್ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗೋವಾ ಮತ್ತು ಕೇರಳ ರಾಜ್ಯದಲ್ಲಿ ಸಿಆರ್ಝಡ್ ನೀತಿ ಸಡಿಲಿಕೆ ಗೊಳಿಸಿದ ಕಾರಣ ಬೀಚ್ ಪ್ರವಾಸೋದ್ಯಮ ಅಭಿವೃದ್ಧಿಗೊಂಡಿದೆ. ಅಗತ್ಯ ಇದ್ದಲ್ಲಿ ಸಿಆರ್ಝಡ್ ನೀತಿಯಲ್ಲಿ ಬದಲಾವಣೆ ಮಾಡಬಹುದು ಎಂದು ಸ್ವಾಮಿನಾಥನ್ ವರದಿಯಲ್ಲಿದೆ. ಈ ನಿಟ್ಟಿನಲ್ಲಿ ಕರಾವಳಿ ಭಾಗದಲ್ಲಿಯು ಬೀಚ್ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಬದಲಾವಣೆ ತರಬೇಕೆಂದು ರಾಜ್ಯ ಪ್ರವಾಸೋದ್ಯಮ ಇಲಾಖೆ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಈ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಸಚಿವಾಲಯದ ಮುಂದಿರಿಸಿದೆ. ಕೇಂದ್ರದಲ್ಲಿ ಈ ಖಾತೆಯನ್ನು ಎಂ.ವೀರಪ್ಪ ಮೊಯ್ಲಿಯವರು ನೋಡಿಕೊಳ್ಳುತ್ತಿರುವ ಕಾರಣ ಶೀಘ್ರವೆ ಪ್ರಸ್ತಾವನೆಗೆ ಅನುಮೋದನೆ ನೀಡಲಿದ್ದಾರೆ. ಇದರಿಂದ ಕರಾವಳಿ ಪ್ರವಾಸೋದ್ಯಮ ಬೆಳೆಯಲಿದೆ.
ಈ ಯೋಜನೆ ಪ್ರಕಾರ ರಾಜ್ಯದಲ್ಲಿ 73,000 ಕೋಟಿ ರೂ., ಹೂಡಿಕೆ ಆಗಬೇಕಿದೆ. ಇದರಿಂದ ರಾಜ್ಯದಲ್ಲಿ 43 ಲಕ್ಷ ಜನರಿಗೆ ಉದ್ಯೋಗವಕಾಶ ದೊರಕಲಿದೆ. 85,000 ಕೋಟಿ ರೂ., ವಾಷರ್ಿಕ ಆದಾಯ ರಾಜ್ಯಕ್ಕೆ ಬರಲಿದೆ ಎಂದರು.![pilikula] (4)](http://www.suddi9.com/wp-content/uploads/2014/02/pilikula-4-300x161.jpg)
ಆಯುವರ್ೇದ ಕೇಂದ್ರ ಉದ್ಘಾಟಿಸಿದ ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಮಾತನಾಡಿ ಪಶ್ಚಿಮ ಘಟ್ಟದ ಅಳಿವಿನಂಚಿನ ಸಸ್ಯಕಾಶಿಗಳನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಪರಿಸಯಿಸುವ ನಿಟ್ಟಿನಲ್ಲಿ ಪಿಲಿಕುಳದಲ್ಲಿ ಸಸ್ಯಕಾಶಿಯ ಅಭಿವೃದ್ಧಿ ಪಡಿಸಲಾಗುತ್ತಿದೆ. ಸಿಆರ್ಝಡ್ ನೀತಿಯಿಂದಾಗಿ ಮನೆ ಕಟ್ಟುವ ಬಡ ಮೀನುಗಾರರಿಗೆ ತೊಂದರೆಯಾಗುತ್ತಿದೆ ಎಂದರು.
ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಜೆ.ಆರ್.ಲೋಬೊ ಮಾತನಾಡಿ ಪ್ರವಾಸೋದ್ಯಮ ಇಲಾಖೆ ಪಿಲಿಕುಳವನ್ನು ಪ್ರಾಧಿಕಾರವನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ರೆಸಾಟರ್್ ನಿಮರ್ಾಣದ ಶಿಲ್ಪಿಗಳಾದ ಕೆ.ಮಂಜುನಾಥ್ ಹಾಗು ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾಕಾರಿ ಎ.ಬಿ.ಇಬ್ರಾಹಿಂ, ತಾಲೂಕು ಪಂಚಾಯಿತಿ ಅಧ್ಯಕ್ಷ ಹರೀಶ್ ಕುಮಾರ್, ಪಿಲಿಕುಳ ಸೊಸೈಟಿ ನಿದರ್ೇಶಕ ಎಸ್.ಕೃಷ್ಣಮೂತರ್ಿ, ಎಂ.ಎ.ಗಫೂರ್, ಪಿ.ವಿ.ಮೋಹನ್ ಉಪಸ್ಥಿತರಿದ್ದರು.
ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ವ್ಯವಸ್ಥಾಪಕ ನಿದರ್ೇಶಕ ಅನೂರ್ ರೆಡ್ಡಿ ಸ್ವಾಗತಿಸಿದರು. ಕಾರ್ಯನಿವರ್ಾಹಕ ನಿದರ್ೇಶಕ ಅವತಾರ್ಸಿಂಗ್ ವಂದಿಸಿದರು. ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ನೂತನವಾಗಿ ನಿಮರ್ಾಣಗೊಂಡ ಪಕಿಧಾಮವನ್ನು ಆರ್.ವಿ.ದೇಶಪಾಂಡೆ ಉದ್ಘಾಟಿಸಿದರು.
ಪಿಲಿಕುಳ ನಿಸರ್ಗಧಾಮ ರೆಸಾಟರ್್ನಲ್ಲಿ 2 ಎಕ್ಸಿಕ್ಯೂಟೀವ್ ಕಾಟೇಜುಗಳು, 8 ಕಾಟೇಜುಗಳು, 6 ವಿಲಾಸಿ ಕೊಠಡಿಗಳು, 3 ಆಯುವರ್ೇದ ಕಾಟೇಜುಗಳು, 21 ಜೋಡಿ ಹಾಸಿಗೆಗಳ ವಸತಿ ಕೊಠಡಿಗಳನ್ನು ಹೊಂದಿದೆ. ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ ಕನರ್ಾಟಕದಲ್ಲಿ ನಿಮರ್ಿಸಿದ 16ನೆ ರೆಸಾಟರ್್ ಇದಾಗಿದೆ. ಫೆ.15ರಿಂದ ಜನರಿಗೆ ಇದರ ಸೇವೆ ಲಭ್ಯ.
ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪಿಲಿಕುಳ ನಿಸರ್ಗಧಾಮದಲ್ಲಿ 10.77 ಕೋಟಿ ರೂ., ವೆಚ್ಚದಲ್ಲಿ 36 ಯೋಜನೆಗಳನ್ನು ರೂಪಿಸಲಾಗಿದೆ. ಇದರಲ್ಲಿ 12 ಯೋಜನೆಗಳು ಪೂರ್ಣಗೊಂಡಿದೆ. 12 ಯೋಜನೆಗಳು ಕಾರ್ಯರೂಪದಲ್ಲಿದೆ. 11 ಯೋಜನೆಗಳಿಗೆ ಅನುಮೋದನೆ ದೊರಕಬೇಕಾಗಿದೆ ಎಂದು ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಇಲಾಖೆ ಸಚಿವ ಆರ್.ವಿ.ದೇಶ್ಪಾಂಡೆ ತಿಳಿಸಿದ್ದಾರೆ.

![pilikula] (3)](http://www.suddi9.com/wp-content/uploads/2014/02/pilikula-3-300x161.jpg)

