ಕರಿನೆರಳು ಮಾತಾಡುತ್ತಿವೆ
ಗಳಿಸಿದರೇನು..? ಉಳಿಸಿದರೇನು..?
ಜಗವ ಸ್ವರ್ಗ ಎಂದು ಮೆರೆದರೇನು..?
ಮರಣವೆಂಬುವುದಿದೆ ನೆನಪಿಸು..!
ಹೊತ್ತು ಗೊತ್ತಿಲ್ಲದೆ ಬರುವುದು
ಬಂದ ಮೇಲೆ ತಿಳಿಯುವುದು
ತುತ್ತು ಅನ್ನಕ್ಕೂ ಬರ
ಕತ್ತು ಹಿಸುಕುವ ಜನರ ನಡುವೆ..!
ತೆರೆದರೆ ಜನನ ಮುಚ್ಚಿದರೆ..?
ರೆಪ್ಪೆ ಮಿಟುಕಿಸಿದರೆ ಜೀವನ
ನೆರಳಿಗೇಕೋ ಅಲ್ಪ ನಗು
ತಿಳಿದವ ನೀ ಮೌನವೇಕೆ..?
ಮುನ್ನುಗ್ಗುತ್ತಿರುವ ಕಾಲಚಕ್ರ
ಯೌವನ, ಆಸ್ತಿ, ಅಂತಸ್ತು
ಮೂರು ದಿನಗಳ ಅತಿಥಿ
ನೆರಳೇಕೋ ಬೆನ್ನ ಹಿಂದಿದೆ..!
ಸಾಯುವ ಮೊದಲು ಬದುಕಲು ಕಲಿ
ಬದುಕಲಿಚ್ಛಿಸದವರಿಗೆ ಸ್ವಚ್ಛಂದ ಬಿಡು
ಬದುಕಲಾರೆ ಸತ್ತು ತುಚ್ಛನಂತೆ
ಇರುವ ಆರಂಭ ಕಾಣಲು ಅಂತ್ಯ
ಕರಿನೆರಳು ಆವರಿಸಲಿದೆ ಕತ್ತಲಾಗಿ..!
ಕವಿ: ಕ-ಶಿಖ, ಬಜಪೆ


