ಸಕಲ ಜೀವರಾಶಿಯಲಿ ನಾನಿರುವೆ
ಮನುಜನಿಗೂ, ಪ್ರಾಣಿಪಕ್ಷಿಗೂ
ನನ್ನಲಿ ಭೇದಭಾವವಿಲ್ಲ
ನಿನಗೇನಾಗಿದೆ ಕುರುಡು ಮಾನವಾ..!
ಬೇಧವಿಲ್ಲದ ನನಗೆ ಜಾತಿಕಟ್ಟಿ
ನನ್ನನು ಗೋಡೆಗೋ ರಸ್ತೆಗೋ ಚೆಲ್ಲುವಾಗ
ಹೆಪ್ಪುಗಟ್ಟುವ ರೋಧನ ಅರಿತೆಯಾ..?
ಕಮಟು ವಾಸನೆ ಬಡಿದರೆ ಸಂತಸವೇ..?
ಒರಟನಂತೆ ವರ್ತಿಸುತ್ತಿರುವಾಗ
ವೇದನೆಯ ನರ್ತನದೊಂದಿಗೆ
ತಾನು ಹೊರಬರುತ್ತಿರಲು ಅಟ್ಟಹಾಸಗೈದ
ನೀನು ಒಬ್ಬ ಬುದ್ಧಿಜೀವಿಯೇ..?
ಕೆಂಬಣ್ಣ ಕೆಂಗಣ್ಣಿಗೆ ಕಾರಣವಾಯಿತೇ
ಕೆಂಪಾದರೂ ಜೀವಕೆ ಕಂಪ
ಸೂಸುತಾ ಸಮ್ರದ್ಧ ಆರೋಗ್ಯ
ಸಮತೋಲನದಲ್ಲಿಡುವೆಯಲ್ಲವೇ..?
ವ್ಯರ್ಥವಾಗಲು ಬಿಡದಿರು, ಬೇಡುವೆ
ಜೀವದಾನಕೆ ಸಾಕ್ಷಿಯಾಗುವೆ
ರಕ್ತದೆಸರಿನಲಿ ನಾ ಕೈ ಮುಗಿಯುವೆ
ದಾನವ ನೀಡಿ ಮೊದಲು ಮಾನವನಾಗು


