*ಏಕಾಂತದ ಆಲಿಂಗನ*
ನಾ ನಾನಾಗಲು ಬಯಸಿದ ಹೊತ್ತು ಏಕಾಂತದ ಒಲವು ದಿವ್ಯ ಆಲಿಂಗನ/
ನನ್ನ ನಾ ಕಂಡುಕೊಳ್ಳುವ ಅವಕಾಶ ಅರಿವಿನ ಆಳ ತನು ಮನ ಆ ಕ್ಷಣ//
ಅಂತರಾಳದ ಪಾತಾಳಕ್ಕಿಳಿದು ಕೊಡುತ್ತಿರುವೆ ಬಿಸಿ ಕಾವು ಹಸಿ ಹಸಿಯಾಗಿ/
ಇಳಿದಷ್ಟು ಇಷ್ಟಿಷ್ಟೆ ನನ್ನೊಳಗೆ ನಡೆದು ಹೊರ ಕೃಷಿ ಸಂತಸದ ನರ್ತನ//
ಕಷ್ಟಗಳ ಎದುರಿಸುವ ಛಾತಿ ಚಿಗಿತು ಒದಗಿದೆ ಅವಶ್ಯ ಸಂಪನ್ಮೂಲ ಔಷಧವಾಗಿ/
ಬಾಧಿಸಿದಂತೆ ಒಂಟಿತನ ಆವರಿಸಿ ನವ ಚೈತನ್ಯ ನೆಗೆದಿದೆ ನಿರಾಳವಾಗಿ ಮೈಮನ//
ಆಂತರ್ಯ ಶಕ್ತಿಯ ಶಾಂತ ಗಣಿಗಾರಿಕೆ ಕೆದಕಿ ಬೇಸರವೂ ಆಗಿದೆ ಶರಣಾಗತಿ/
ತಲ್ಲಣಗಳ ಸಂಘರ್ಷ ತವಕಗಳ ವಿಹಾರ ತಿಳಿ ಹೇಳಿ ಹುಡುಕುವೆ ಕಾರಣ//
ಮಾನಸಿಕ ಸ್ಥಿತಿ ಸಧೃಡವಾಗಿಡುವ ಸಂತೃಪ್ತಿ ಪಡೆಯುವ ಸಂಭ್ರಮ ಈ ವೈಭವ/
ಏನಿದು ಸೊಬಗು ಮೈಗೂಡಿ ಸುತ್ತಲೂ ಸಮಾನ ಆಸಕ್ತ ಹಿತ ಮಿತ ಹವಾಮಾನ//
ಹೋದದ್ದೆಲ್ಲಾವನ್ನು ಪುನಃ ಮರಳಿಸುವ ರಸ ಅನುಭವ ಬದುಕಿನ ರಾಯಭಾರತ್ವ/
ಸವಾಲುಗಳಿಗೆ ಅಣಿ ಮಾಡಿ ವಿಚಾರದೊಳು ನೀ ಧ್ಯಾನ ಸಮಾಧಾನಗಳ ಸಂಧಾನ//
ಬಸುನ ಶಾಶ್ವತ ಸಂಗಾತಿ ನೀ ಮಾತ್ರ, ಲವ್ ಯೂ ಓ ನನ್ನ ಏಕಾಂತವೇ/
ನೀಡಿರುವೆ ಅಮೂರ್ತ ಆರೈಕೆ ಮೌನದಲ್ಲಿಯೇ ನಿಸ್ವಾರ್ಥ ಭಾವಗಳ ಸಮ್ಮೇಳನ//
*ಬಸವರಾಜ ಕಾಸೆ*
ಮು| ಪೋ| ದೇವಾಪೂರ
ತಾ| ಜಿ| ವಿಜಯಪುರ