ಮಕರ ಸಂಕ್ರಾಂತಿಯ ಶುಭದಿನದಂದು ಆರಂಭವಾದಂತಹಾ ಪುಟ್ಟ ಸಂಸ್ಥೆ ಸುದ್ದಿ9 ವೆಬ್‍ಸೈಟ್
ಜೈ ರಾಮಕೃಷ್ಣ. ಐದು ವರುಷಗಳ ಹಿಂದೆ ಮಕರ ಸಂಕ್ರಾಂತಿಯ ಶುಭದಿನದಂದು ಆರಂಭವಾದಂತಹಾ ಪುಟ್ಟ ಸಂಸ್ಥೆ ಸುದ್ದಿ9 ವೆಬ್‍ಸೈಟ್, ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು ಮತ್ತು ಹಳ್ಳಿ ಹಳ್ಳಿಗಳ ವಾರ್ತೆಯು ಎಲ್ಲರನ್ನು ತಲುಪುವಂತಾಗಬೇಕೆಂದು ಆರಂಭವಾದಂತಹಾ ಈ ಸಂಸ್ಥೆ ಯಶಸ್ವಿಯಾಗಿ 5ವರುಷಗಳನ್ನು ಪೂರೈಸಿ 6ನೇ ವರುಷಗಳತ್ತ ಪಾದಾರ್ಪಣೆಗೈಯುತ್ತಲಿದೆ.
ನಮ್ಮ ಆಶ್ರಮದ ಹಲವಾರು ಕಾರ್ಯಕ್ರಮಗಳನ್ನು ಜನಮಾನಸಗಳಿಗೆ ತಲುಪಪುವಂತೆ ಮಾಡಲು ಸುದ್ದಿ9 ಪ್ರಮುಖ ಪಾತ್ರವನ್ನು ವಹಿಸುತ್ತಿದೆ, ಯಾವುದೇ ರೀತಿಯ ಅಶ್ಲೀತೆಗೆ ಆಸ್ಪದವಿಲ್ಲದೆ, ರಾಜಕೀಯವಿಲ್ಲದೆ ಸಾಮರಸ್ಯದ ಸುದ್ದಿಯನ್ನು ಬಿತ್ತರಿಸುವಲ್ಲಿ ಸುದ್ದಿ9 ಸಫಲವಾಗಿರುವುದು ಹೆಮ್ಮೆಯ ವಿಚಾರ.
ಅಂದು ಬಹಳ ಕಷ್ಟದಿಂದ ಪ್ರಾರಂಭವಾದಂತಹಾ ಸುದ್ದಿ9 ಇಂದು ಜನರನ್ನು ತಲುಪಿರುವುದಕ್ಕೆ ಮೂಲ ಕಾರಣ ಶ್ರೀ ವಾಮನ್ ಅವರ ಸತತ ಪ್ರಯತ್ನ . ಸುದ್ದಿ9 ವಾಹಿನಿಯು ಇನ್ನೂ ಹೆಚ್ಚಿನ ಜನರನ್ನು ತಲುಪುವಂತಾಗಲಿ, ಇನ್ನು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುವಂತಾಗಲಿ ಎಂದು ದಿವ್ಯತ್ರಯರಲ್ಲಿ ಪಾರ್ಥಿಸುತ್ತಾ, ಶ್ರೀ ಮಾತೆ ರಾಜರಾಜೇಶ್ವರಿ ಇನ್ನು ಹೆಚ್ಚಿನ ಶಕ್ತಿಯನ್ನು ಸುದ್ದಿ9 ಸಂಸ್ಥೆಗೆ ಹಾಗೂ ಶ್ರೀ ವಾಮನ್ ಅವರಿಗೆ ನೀಡಲಿ ಎಂದು ಪ್ರಾರ್ಥಿಸೋಣ..
ರಾಮಕೃಷ್ಣ ಶರಣಂ
ಇಂತಿ ಭಗವತ್ಸೇವೆಯಲ್ಲಿ ನಿಮ್ಮವ
ಸ್ವಾಮಿ ವಿವೇಕಚೈತನ್ಯಾನಂದ