ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಕ್ಷಿಪ್ರಗತಿಯಲ್ಲಿ ಸಾಗುತ್ತಿದ್ದು ದೇವಳದ ಜೀರ್ಣೋದ್ಧಾರಕ್ಕೆ ದೇವಳದ ಮಾಜಿ ಟ್ರಸ್ಟಿ ಅಮ್ಮುಂಜೆಗುತ್ತು ದಿ.ಸೇಸಣ್ಣ ಶೆಟ್ಟಿ ಅವರ ಸವಿ ನೆನಪಿಗಾಗಿ ಕೊಡ್ಮಾಣ್ಗುತ್ತಿನ ಕುಟುಂಬಿಕರ ಪರವಾಗಿ ಮಿಜಾರ್ಗುತ್ತು ಬಾಲಕೃಷ್ಣ ಆಳ್ವ ರೂ. 10 ಲಕ್ಷ ಮೊತ್ತವನ್ನು ದೇವಳಕ್ಕೆ ನೀಡಿದರು.
ಅಮ್ಮುಂಜೆಗುತ್ತು ಜೀವರಾಜ ಶೆಟ್ಟಿ,ಉಳಿಪಾಡಿಗುತ್ತು ಪ್ರಸನ್ನ ಕುಮಾರ್ ಶೆಟ್ಟಿ,ಸಂಜೀವ ಶೆಟ್ಟಿ, ಸುಮತಿ ಹೆಗ್ಡೆ, ಅಮಿತ ಆಳ್ವ ಅವರೊಂದಿಗಿದ್ದರು. ದೇವಳದ ಆಡಳಿತ ಮೊಕ್ತೇಸರ ಅಮ್ಮುಂಜೆಗುತ್ತು ಡಾ.ಮಂಜಯ್ಯ ಶೆಟ್ಟಿ, ಪವಿತ್ರಪಾಣಿ ಮಾಧವ ಭಟ್,ನಾರಾಯಣಭಟ್, ರಾಮ್ ಭಟ್ ಉಪಸ್ಥಿತರಿದ್ದರು.




