ಪೊಳಲಿ : ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಬಿಲ್ಲವ ಸಮಾಜವು ಸೇವಾ ರೂಪವಾಗಿ ಅರ್ಪಿಸಲಿರುವ `ಕೊಡಿಮರ’ಕ್ಕೆ(ಧ್ವಜಸ್ತಂಭ) ಸುಳ್ಯ ಸಂಪಾಜೆ ರಕ್ಷಿತಾರಣ್ಯ ಪ್ರದೇಶದಲ್ಲಿ ಗುರುತಿಸಲಾಗಿದ್ದ ಬ್ರಹತ್ ಗಾತ್ರದ ಮರವನ್ನು ನ.15ರ ಶುಭ ಮುಹೂರ್ತದಲ್ಲಿ ಕಡಿಯಲಾಯಿತು.ಬೆಳಿಗ್ಗೆ 6 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿದ ಬಳಿಕ, ಭಕ್ತರ ತಂಡ ಮರ ಕಡಿಯಲು ಸುಳ್ಯದತ್ತ ಮುಖ ಮಾಡಿತು.

16-6ಅಲ್ಲಿ, ಮಡಿಕೇರಿ ವಿಭಾಗದ ಪಟ್ಕ ಘಾಟ್ ಪ್ರದೇಶದಲ್ಲಿ ಬೆಳಿಗ್ಗೆ 9 ಗಂಟೆಗೆ ವನಪೂಜೆ ಹಾಗೂ ಇತರ ಪೂಜಾ ವಿದಿ-ವಿಧಾನ ನಡೆದ ಬಳಿಕ, 11.30ಕ್ಕೆ ಸುಮಾರು 95 ವರ್ಷಗಳಷ್ಟು ಹಳೆಯದಾದ 80 ಅಡಿ ಎತ್ತರ ಮತ್ತು 12 ಅಡಿ ಸುತ್ತಳತೆಯ ಸಾಗುವಾನಿ(ತೆಕ್ಕಿ) ಮರ ಕಡಿಯಲು ಆರಂಭಿಸಲಾಗಿ, ಸಂಜೆ 5 ಗಂಟೆಯ ಹೊತ್ತಿಗೆ ಮರ ಧರಾಶಾಹಿ ಮಾಡಲಾಯಿತು. ಈ ಕೆಲಸದಲ್ಲಿ ನುರಿತ ಉಪ್ಪಿನಂಗಡಿಯ 25 ಮಂದಿ ಒಳಗೊಂಡಿದ್ದರು. ಮರ ಎತ್ತಂಗಡಿ ಮಾಡಲು ಕ್ರೇನ್ ಹಾಗೂ ಟ್ರಕ್ ಬಳಸಲಾಯಿತು.

16-5

0060

001

003

0005
ಕತ್ತರಿಸಲಾದ ಮರವನ್ನು ರಾತ್ರಿ 11.30 ಸುಮಾರಿಗೆ ಹತ್ತಿರದ ಮಾರ್ಗದವರೆಗೆ ತರಲಾಯಿತು. ಅಲ್ಲಿಂದ ಟ್ರಕ್ ಮೂಲಕ ಕಲ್ಲಡ್ಕಕ್ಕೆ ತಂದು ಇರಿಸಲಾಯಿತು. ದೇವಸ್ಥಾನಕ್ಕೆ ಸಂಬಂಧಿಸಿದ ತಂತ್ರಿಗಳಾದ ವೆಂಕಟೇಶ್, ಸುಬ್ರಹ್ಮಣ್ಯ ತಂತ್ರಿ, ದೇವಾಲಯದ ಪವಿತ್ರಪಾಣಿ ಮಾಧವ ಭಟ್, ನಾರಾಯಣ ಭಟ್, ರಾಮ ಭಟ್ ಮತ್ತು ಮಾಧವ ಮಯ್ಯ, ಅನಂತ ಪದ್ಮನಾಭ,ಪೂಜಾ ವಿಧಿ ವಿಧಾನ ನೆರವೇರಿಸಿದರು. ದೇವಾಲಯದ ವಾಸ್ತು ಶಿಲ್ಪಿ ಮಹೇಶ್ ಮುನಿಯಂಗಳ್ ಇದ್ದರು.

16-1
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಮೊಕ್ತೇಸರ ಹಾಗೂ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ತಾರನಾಥ ಆಳ್ವ ಉಳಿಪಾಡಿಗುತ್ತು, ಮೊಕ್ತೇಸರ ಚೇರ ಸೂರ್ಯನಾರಾಯಣ ರಾವ್,ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಇದ್ದರು. ಕೃಷ್ಣರಾಜ ಮಾರ್ಲ, ಗಿರಿಧರ ಶೆಟ್ಟಿ, ರಾಜೇಶ್ ನಾಯ್ಕ್‍ಉಳಿಪಾಡಿಗುತ್ತು , ಜೀವರಾಜ ಶೆಟ್ಟಿ ಅಮ್ಮುಂಜೆಗುತ್ತು,ಸುಬ್ರಾಯ ಕಾರಂತ, ಕೃಷ್ಣ ಕುಮಾರ್ ಪೂಂಜ,  ಚಂದ್ರಶೇಖರ ಭಂಡಾರಿ, ವೆಂಕಟೇಶ್ ನಾವಡ, ಸಂಪತ್ ಕುಮಾರ್ ಶೆಟ್ಟಿ ಅಮ್ಮುಂಜೆ,ವಿದ್ಯಾಚರಣ್ ಶೆಟ್ಟಿ, ರೀತೇಶ್ ಮಾರ್ಲ, ಪವನ್ ಕುಮಾರ್ ಶೆಟ್ಟಿ, ಕುಮಾರ ,ರಾಮ್ ದಾಸ್ ಬಂಟ್ವಾಳ ಉಪಸ್ಥಿತರಿದ್ದರು.

ಹಾಗೂ ಬಿಲ್ಲವ ಸಮಾಜದ ಪರವಾಗಿ ನೂತನ ಧ್ವಜಸ್ತಂಭ ನಿರ್ಮಾಣ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಗೌರವಾಧ್ಯಕ್ಷ ರಾಮದಾಸ ಮಜಿಲಗುತ್ತು, ಕಾರ್ಯದರ್ಶಿ ಪುರುಷ ಸಾಲ್ಯಾನ್, ಚಂದಪ್ಪ ಅಂಚನ್ ಮಜಿಲಗುತ್ತು, ಯಶವಂತ ಕೋಟ್ಯಾನ್, ಭುವನೇಶ್ ಪಚ್ಚಿನಡ್ಕ, ಉಮೇಶ್ ಪೂಜಾರಿ ಬಾರಿಂಜೆ, ಸದಾಶಿವ ಕಾಜಿಲ,ಚರಣ್,ರಾಮಪ್ಪ ಪೂಜಾರಿ,ನವೀನ್ , ಮನೋಜು, ಲೋಕೇಶ್, ದಾಮೋಧರ,ನಿತಿನ್, ನಿರಂಜನ್ ಮತ್ತು ಬಿಲ್ಲವ ಕೊಡಡಿಮರ ನಿರ್ಮಾಣ ಸಮಿತಿ ಸದಸ್ಯರು ಇದ್ದರು.

0009

16-1
ಮರ ಕಡಿಯುವ ಹೊತ್ತಿಗೆ ಸ್ಥಳದಲ್ಲಿದ್ದ ಅರಣ್ಯಾಧಿಕಾರಿ ಧಮೇಂದ್ರ, ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಮೊಕ್ತೇಸರ ದಿವಾಕರ ರೈ, ಪ್ರಭಾಕರ ರೈ, ಕಾರ್ಯನಿರ್ವಹಣಾಧಿಕಾರಿ ಹರೀಶ್ಚಂದ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಮೊಕ್ತೇಸರ ಮಹೇಶ್ ಕರಿಕಲ, ಸ್ಥಳೀಯರು ಹಾಗೂ ಪೊಳಲಿ ದೇವಸ್ಥಾನದ ಆಡಳಿತ ವರ್ಗ, ಸಾವಿರ ಸೀಮೆಯ ಭಕ್ತಾದಿಗಳು ಸಂಪೂರ್ಣ ಸಹಕಾರ ನೀಡಿದರು.

00095

ಮರ ಕಡಿಯುತ್ತಿದ್ದ ಹೊತ್ತಿಗೆ ಅನಿರೀಕ್ಷಿತ ಎಂಬಂತೆ ಸುತ್ತಲ ಪ್ರದೇಶದಲ್ಲಷ್ಟೇ ತುಂತುರು ಮಳೆಯಾಯಿತು. ಇದು ನಿಜಕ್ಕೂ ಶುಭ ಸೂಚಕ ಎಂದು ಸ್ಥಳದಲ್ಲಿ ನೆರೆದಿದ್ದ ಮಂದಿ ಹೇಳಿಕೊಂಡರು. ಪೊಳಲಿ ದೇವಸ್ಥಾನದ ವಾರ್ಷಿಕ ಉತ್ಸವದ ರಥೋತ್ಸವದ ವೇಳೆ ಮಳೆಯಾಗುವುದು ವಾಡಿಕೆ.

By Suddi9

Leave a Reply

Your email address will not be published. Required fields are marked *