ಗುರುಪುರ: ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳೆದ 34 ವರ್ಷದಿಂದ ಸಿಬ್ಬಂದಿಯಾಗಿ ದುಡಿದ ಪ್ರಭಾಕರ ಶೆಟ್ಟಿ ಅವರನ್ನು ಶನಿವಾರ ನ್ಮಾನಿಸಲಾಯಿತು.
ಸಾರ್ವಜನಿಕ ವಲಯದಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದ ಪ್ರಾಮಾಣಿಕ ಹಾಗೂ ಕರ್ತವ್ಯಕ್ಕೆ ನಿಷ್ಠೆ ತೋರಿಸುತ್ತಿದ್ದ ಅವರು ಕೃಷಿಕರಾಗಿ, ಧಾರ್ಮಿಕ ಕ್ಷೇತ್ರಗಳಲ್ಲಿ ಯಕ್ಷಗಾನ ತನ್ನನ್ನು ತಾನು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಕೆಲವು ವರ್ಷದಿಂದ ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವಾಮಂಜೂರು ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಇದೀಗ ನಿವೃತಿಹೊಂದಿದ ಅವರನ್ನು ಗುರುಪುರ ವ್ಯವಸಾಯ ಸಹಕಾರಿ ಸಂಘದ ವತಿಯಿಂದ ಪ್ರಭಾಕರ ಶೆಟ್ಟಿ, ಸುಜಯ ದಂಪತಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ,ಉಪಾಧ್ಯಕ್ಷ ಪಿ.ಶೇಖಬ್ಬ,ನಿರ್ದೇಶಕರಾದ ನಾಗೇಶ, ಶೀನ ಕೋಟ್ಯಾನ್, ಸದಾಶಿವ ಶೆಟ್ಟಿ, ರೀತಾ ಸಿ.ಸುವರ್ಣ,ನಳಿನಾಕ್ಷಿ ಹಾಗೂ ಬಾಬು ಸಾಲ್ಯಾನ್,ಕಿಟ್ಟಣ್ಣ ರೈಜಿಕೆ, ವೆಂಕಟೇಶ್ ಬಾಳಿಗ, ಯಶವಂತ ಶೆಟ್ಟಿ, ಸುಬ್ಬಯ್ಯ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಬಿ.ನಾಗರಾಜ ರಾವ್ ಮತ್ತಿತರರು ಇದ್ದರು.

ವಿಶ್ವನಾಥ ಆಚಾರ್ಯ ಅಭಿನಂದನಾ ಭಾಷಣ ಮಾಡಿದರು. ವಿನಯ ಕುಮಾರ್ ಶೆಟ್ಟಿ ಸ್ವಾಗತಿಸಿ ಕಮಾಲಾಕ್ಷ ಕಾರ್ಯಕ್ರಮ ನಿರೂಪಿಸಿದರು.
*ವೀಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.




