ಮಂಗಳೂರು : ಗುರುಪುರ ಶ್ರೀಕೃಷ್ಣ ಮಂಡಳಿಯ ವತಿಯಿಂದ 49ನೇ ವರ್ಷದ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಇಂದು(ಸೆ. 14) ಮೊಸರು ಕುಡಿಕೆ ಉತ್ಸವ, ಸಭಾ ಕಾರ್ಯಕ್ರಮ ಹಾಗೂ ಶೋಭಾ ಮೆರವಣಿಗೆ ಜರುಗಲಿದೆ.
ಅಪರಾಹ್ನ 4 ಗಂಟೆಗೆ ಗುರುಪುರ ಜಂಗಮ ಮಠದ ವಠಾರದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಜಂಗಮ ಮಠದ ಶ್ರೀ ನಿರಂಜನ ಪ್ರಣವ ಸ್ವರೂಪಿ ರುದ್ರಮುನಿ ಸ್ವಾಮಿ ಆಶೀರ್ವಚನ ನೀಡಲಿದ್ದಾರೆ. ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮಾಜಿ ಸಚಿವ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಲುರುವ ಈ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮನಾಭ ಕೋಟ್ಯಾನ್(ಧಾರ್ಮಿಕ ಪರಿಷತ್ ಸದಸ್ಯ, ರಾಜ್ಯ ಸರ್ಕಾರ), ಡಾ ಭರತ್ ಶೆಟ್ಟಿ ವೈ(ಬಿಜೆಪಿ ಮುಖಂಡ), ಮಿಥುನ್ ರೈ(ಕಾಂಗ್ರೆಸ್ ಮುಖಂಡ), ರಾಜಕುಮಾರ್ ಶೆಟ್ಟಿ ತಿರುವೈಲುಗುತ್ತು ವಾಮಂಜೂರು(ಅಧ್ಯಕ್ಷ, ಗುರುಪುರ ಬಂಟರ ಮಾತೃ ಸಂಘ) ಹಾಗೂ ಬಿ ಸದಾನಂದ ಸಪಲಿಗ(ಕಾರ್ಯ ನಿರ್ವಹಣಾಧಿಕಾರಿ, ತಾ ಪಂ ಮಂಗಳೂರು) ಪಾಲ್ಗೊಳ್ಳುವೆಂದರು ಮಂಡಳಿಯ ಪ್ರಕಟಣೆಯೊಂದು ತಿಳಿಸಿದೆ.
