ಕಲ್ಲಡ್ಕ: ಶ್ರೀರಾಮ ಸೌಹಾರ್ದ ಸಹಕಾರಿ ನಿಯಮಿತ. ವಾರ್ಷಿಕ ಮಹಾಸಭೆಯು ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಬಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

25 btl rama
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಸಂಸ್ಥೆಯ ನಿರ್ದೇಶಕರಾದ ಡಾ. ಪ್ರಭಾಕರ ಭಟ್ ಮಾತನಾಡಿ, ಈ ಸಂಸ್ಥೆಯು ಸದಸ್ಯರ ಸಹಭಾಗಿತ್ವದಲ್ಲಿ ಕಾರ್ಯಾಚರಿಸುತ್ತಿದೆ. ಸದಸ್ಯರು ಹೆಚ್ಚಿನ ರೀತಿಯಲ್ಲಿ ತೊಡಗಿಕೊಂಡಾಗ ಈ ಸಂಸ್ಥೆ ಶೀಘ್ರದಲ್ಲಿ ಬೆಳೆಯಲು ಸಹಕಾರಿಯಾಗುವುದು ಎಂದು ಹೇಳಿದರು.
ಸಂಸ್ಥೆಯ ನಿರ್ದೇಶಕರು ಮತ್ತು ಕಾನೂನು ಸಲಹೆಗಾರರ ವೈಯಕ್ತಿಕ ದೇಣಿಗೆಯಿಂದ 50ಸಾವಿರ ರೂಪಾಯಿಯನ್ನು ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಮಧ್ಯಾಹ್ನದ ಭೋಜನ ವ್ಯವಸ್ಥೆಗೆ ನೀಡಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಬಿ. ನಾರಾಯಣ ಸೋಮಯಾಜಿ, ರಮೇಶ ಎನ್, ಕುಶಾಲಪ್ಪ ಅಮ್ಟೂರು, ರವಿರಾಜ ಕಣಂತೂರು, ಕೃಷ್ಣಪ್ರಸಾದ್, ವಸಂತ ಬಲ್ಲಾಳ, ನಾಗೇಶ ಕಲ್ಲಡ್ಕ, ಗಂಗಾ ಮಾತಾಜಿ, ಮಲ್ಲಿಕಾ ಶೆಟ್ಟಿ, ಪ್ರೇಮಾ ಉಪಸ್ಥಿತರಿದ್ದರು.
ಮುಖ್ಯ ನಿರ್ವಾಹಣಾ ಅಧಿಕಾರಿ ಎಂ. ಉಗ್ಗಪ್ಪ ಶೆಟ್ಟಿ ವರದಿ ವಾಚಿಸಿದರು.
ಉಪಾಧ್ಯಕ್ಷ ಸುಜಿತ್ ಕುಮಾರ್ ವಂದಿಸಿ, ನಿರ್ದೇಶಕ ಯತಿನ್ ಕುಮಾರ್ ಏಳ್ತಿಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.

By suddi9

Leave a Reply

Your email address will not be published. Required fields are marked *