ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ (ರಿ)ನ ಬಂಟ್ವಾಳ ವಲಯದ ವತಿಯಿಂದ ಜಿಲ್ಲಾ ಮಟ್ಟದ ಎ.ಐ  ಕಾರ್ಯಾಗಾರವು ಬಿ.ಸಿ ರೋಡ್ ನ  ರೋಟರಿ ಕ್ಲಬ್ ಸಭಾಭವನದಲ್ಲಿ ಶನಿವಾರ ನಡೆಯಿತು.
ಅಸೋಸಿಯೇಷನ್ ನ ಬಂಟ್ವಾಳ ವಲಯಧ್ಯಕ್ಷರಾದ  ರಾಜೇಂದ್ರ ಕೆ.   ಕಾರ್ಯಗಾರದ ಅಧ್ಯಕ್ಷ ತೆ ವಹಿಸಿದ್ದು,   ಎಸ್. ಕೆ. ಪಿ.ಎ ಜಿಲ್ಲಾಧ್ಯಕ್ಷ ರಾದ ನವೀನ್ ರೈ ಪಂಜಲ ರವರು ಕಾರ್ಯಾಗಾರ ಉದ್ಘಾಟಿಸಿ ಛಾಯಾಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಕೋರಿದರು .

ಜಿಲ್ಲಾ ಪ್ರದಾನ ಕಾರ್ಯದರ್ಶಿ  ಅಜಯ್ ಮಂಗಳೂರು, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ ಆನಂದ್, ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಹರೀಶ್ ಕುಂದರ್, ಗೌರವಾಧ್ಯಕ್ಷರಾದ ಕಿಶೋರ್,ಛಾಯಾ ಕಾರ್ಯದರ್ಶಿ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಲಯದ ಕಾರ್ಯದರ್ಶಿ ರವಿ ಕಲ್ಪನೆ ಸ್ವಾಗತಿಸಿ, ಕೋಶಾಧಿಕಾರಿ ಕೃಷ್ಣ ರಾಜ್ ರಾವ್ ವಂದಿಸಿದರು. ದಯಾನಂದ್ ಬಂಟ್ವಾಳ್ ರವರು ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಸಂದೀಪ್ ಶ್ಯಾಡೋ ರವರು  ಎ.ಐ.ಕುರಿತು ಮಾಹಿತಿ  ನೀಡಿದರು.

By Suddi9

Leave a Reply

Your email address will not be published. Required fields are marked *