ಬಂಟ್ವಾಳ:ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಮಯ ಜೀವನ, ದೇಶಪ್ರೇಮ, ಶೌರ್ಯ, ಆಡಳಿತ ವೈಖರಿ ಹಾಗೂ ಹಿಂದೂ ಸಾಮ್ರಾಜ್ಯ ಸ್ಥಾಪನೆಗಾಗಿ ಮಾಡಿರುವ ಸಾಧನೆಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಸ್ಫೂರ್ತಿ ಪಡೆದು ದೇಶಭಕ್ತಿ, ಧೈರ್ಯ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಶ್ರೀರಾಮ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿ,ರಾ.ಸ್ವ.ಸೇ. ಸಂಘದ ಪ್ರಚಾರಕರು, ವಿಟ್ಲ ತಾಲೂಕಿನ ಘೋಷ್ ಪ್ರಮುಖರಾದ ರಾಜಗೋಪಾಲ್ ಕಡೇಶಿವಾಲಯ ಅವರು ಕರೆ ನೀಡಿದರು.

ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಶನಿವಾರ ನಡೆದ ಹಿಂದೂ ಸಾಮ್ರಾಜ್ಯೋತ್ಸವ ಆಚರಣೆ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರು ಹಾಗೂ ಜೀವಶಾಸ್ತ್ರ ಉಪನ್ಯಾಸಕರಾದ  ಶೈಲಿನಿ  ಉಪಸ್ಥಿತರಿದ್ದರು.  ಕನ್ನಡ ಉಪನ್ಯಾಸಕರಾದ  ಅಶೋಕ್  ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *