ಬಂಟ್ವಾಳ: ಬಿ.ಮೂಡ ಗ್ರಾಮದ ಕಾಮಾಜೆ ದೈಪಲ ಶಿವಾಜಿನಗರದ ಶ್ರೀ ರಾಮ ಭಜನಾ ಮಂದಿರ ಶಿವಾಜಿನಗರ ಕಾಮಾಜೆ ದೈಪಲದಲ್ಲಿ 16ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವವನ್ನು ಗಣಯಾಗ ಹಾಗೂ ಶ್ರೀ ರಾಮ ದೇವರಿಗೆ ಪ್ರಸನ್ನ ಪೂಜೆ ಯೊಂದಿಗೆ ಆಚರಿಸಲಾಯಿತು. ಬಳಿಕ ಶ್ರೀ ರಾಮ ಭಜನಾ ಮಂದಿರದ ಜೀರ್ಣೋದ್ಧಾರಗೊಳಿಸುವ ನಿಟ್ಟಿನಲ್ಲಿ ಮಂದಿರದ ಸಮಿತಿ ಅಧ್ಯಕ್ಷರಾದ ಕೇಶವ ದೈಪಲ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ನಡೆಸಲಾಯಿತು.

ವರ್ಧಂತ್ಯುತ್ಸವದ ಪ್ರಯುಕ್ತ ಮಂದಿರದ ವಠಾರದಲ್ಲಿ ಗಿಡ ನಾಟಿ ಮಾಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಮಧ್ಯಾಹ್ನ ಮಹಾ ಪೂಜೆಯ ನಂತರ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಭಕ್ತರಿಂದ ಭಜನಾ ಸಂಕೀರ್ತನೆ ನಡೆಯಿತು.
ಭಜನಾ ಮಂದಿರದ ಸಮಿತಿ ಅಧ್ಯಕ್ಷ ಕೇಶವ ದೈಪಲ, ಉಪಾಧ್ಯಕ್ಷರಾದ ಚಂದಪ್ಪ ರಾಜೀವಪಲ್ಕೆ, ಪ್ರಧಾನ ಕಾರ್ಯದರ್ಶಿ ಹರೀಶ ದೈಪಲ, ಕೋಶಾಧಿಕಾರಿ ಯಾದವ ದೈಪಲ, ಜೊತೆ ಕಾರ್ಯದರ್ಶಿ ರಾಘವೇಂದ್ರ ಶಿವಾಜಿನಗರ, ಸೋಮನಾಥ, ಉಮೇಶ್, ಚೇತನ್ ಕುಮಾರ್, ಲೋಕೇಶ್, ಪೊಟ್ಟಕೋಡಿ, ವಾಮನ, ಪ್ರಕಾಶ್, ರಾಜೇಶ್, ಗೋಪಾಲಕೃಷ್ಣ, ಅವಿನಾಶ್, ಪರಮೇಶ್ವರ, ಬಸವರಾಜ್,ಯೋಗೀಶ್,ಉಮೇಶ್, ಅಶೋಕ್ ಕಾಮಾಜೆ, ಗಣೇಶ್ ಕಾಮಾಜೆ, ಜಗದೀಶ್ ಕಾಮಾಜೆ, ಮಧುಕರ ಕಾಮಾಜೆ, ಸೀತಾಮಾತಾ ಮಹಿಳಾ ಸಮಿತಿಯ ಅಧ್ಯಕ್ಷೆ ವಾಣಿ ಕೇಶವ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ದೈಪಲ, ಪ್ರಮಿಳಾ ಕಾಮಾಜೆ, ವೇದಾವತಿ,ಭಾರತಿ, ಪುಷ್ಪ,ಪೊಟ್ಟಕೋಡಿ, ಸುಶೀಲ ರಾಮ ಶಿವಾಜಿನಗರ, ಗೀತಾ, ಕುಮುದ,ಉಮಾವತಿ, ಪ್ರೇಮ, ಸವಿತಾ,ಸುರೇಖಾ, ಚಂದ್ರಿಕಾ, ಮಮತಾ, ಲಕ್ಷ್ಮೀ,ಯಶೋಧ ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು.
