ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪದವಿ ಕಾಲೇಜಿನಲ್ಲಿ ಪ್ರದೀಪ್ತ ಸಾಂಸ್ಕೃತಿಕ ಸಂಘದ ವತಿಯಿಂದ ಓಣಂ ಹಬ್ಣವನ್ನು ವಿಶೇಷವಾಗಿ ಪೂಕಳಂ, ತಿರುವಾದಿರಾ, ವಾದ್ಯಗೋಷ್ಠಿ ಸ್ಫರ್ಧೆಗಳನ್ನು ಆಯೋಜಿಸುವುದರ ಮೂಲಕ ಆಚರಿಸಲಾಯಿತು. ಅತಿಥಿಗಳಾಗಿ ದಾವಣಗೆರೆಯ ಹಾಲಮ್ಮ ಪದವಿ ಹಾಗೂ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳು ಆಗಮಿಸಿ, ಇಲ್ಲಿ ಸಿಗುವ ಸಂಸ್ಕಾರಯುತ ಶಿಕ್ಷಣ, ಶಿಸ್ತು, ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆ ಹಾಗೂ ಒಟ್ಟು ಸಂಸ್ಥೆಯ ವಾತಾವರಣವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.DSC_0125

ವೇದಿಕೆಯಲ್ಲಿ ಪುತ್ತೂರು ವಿವೇಕಾನಂದ ವಿದ್ಯಾವರ್ದಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ, ಪದವಿ ವಿಭಾಗದ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್‍ಕಟ್ಟೆ, ಪ.ಪೂ ವಿಭಾಗದ ಪ್ರಾಂಶುಪಾಲ ವಸಂತ ಬಲ್ಲಾಳ್, ಪ್ರಾಥಮಿಕ ವಿಭಾಗದ ರವಿರಾಜ್ ,ಡಾ| ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಸಂಘದ ನಿರ್ದೇಶಕರಾದ ಉಪನ್ಯಾಸಕಿ ಹರ್ಷಿತಾ ಮತ್ತು ಜಯಲಕ್ಷ್ಮಿ ಸಹಕರಿಸಿದರು.

By suddi9

Leave a Reply

Your email address will not be published. Required fields are marked *