ಬಂಟ್ವಾಳ: ಕರ್ನಾಟಕ ಪ್ರೌಡ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಭರತನಾಟ್ಯ ಜೂನಿಯರ್ ವಿಭಾಗದಲ್ಲಿ ಕಲ್ಲಡ್ಕ ಕಲಾನಿಕೇತನ ನಾಟ್ಯ ಶಾಲೆಯ ವಿದುಷಿ ವಿದ್ಯಾ ಮನೋಜ್ ಇವರ ಶಿಷ್ಯೆ ಬಿಸಿರೋಡಿನ ಪಿ ಪೂರ್ಣಶ್ರೀ ರೈ ಇವರು ಶೇ 93.25 ಅಂಕ ಗಳಿಸಿರುತ್ತಾರೆ.
ಈಕೆ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕದಲ್ಲಿ 7ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ. ಬಿಸಿರೋಡಿನ ಯುವ ನ್ಯಾಯವಾದಿ ಪ್ರಸಾದ್ ಕುಮಾರ್ ಮತ್ತು ನ್ಯಾಯವಾದಿ ಆಶಾ ಪ್ರಸಾದ್ ದಂಪತಿ ಪುತ್ರಿಯಾಗಿರುತ್ತಾರೆ.
