ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಒಂದುಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ.ಇದರಿಂದಾಗಿಇದುಇಡೀರಾಷ್ಟ್ರಮಟ್ಟದಲ್ಲಿಉತ್ತಮ ವಿದ್ಯಾಸಂಸ್ಥೆಯಾಗಿರೂಪುಗೊಂಡಿದೆ.ಈ ಸಂಸ್ಥೆಗೆ ಕೊಲ್ಲೂರುದೇವಾಲಯದ ವತಿಯಿಂದ ನೀಡುತ್ತಿದ್ದಅನುದಾನ ಕಡಿತಗೊಳಿಸಿರುವುದು ದುಃಖಕರ.ನನ್ನಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ. ನಾನು ನನ್ನ ವೈಯಕ್ತಿಕವಾಗಿ ಬಂದಎಲ್ಲಾ ಕಷ್ಟಗಳನ್ನು ನಾನು ಎದುರಿಸಲು ಸಿದ್ದನಿದ್ದೇನೆ ಆದರೆ ಸಮಾಜದಲ್ಲಿಇಂತಅದ್ಭುತವಾದ ಶಿಕ್ಷಣ ಸಂಸ್ಥೆಯನ್ನು ನಡೆಸುವಂತಹಡಾ. ಪ್ರಭಾಕರ ಭಟ್‍ರವರಿಗೆತೊಂದರೆಯಾದರೆ ಈ ಜನಾರ್ದನರೆಡ್ಡಿ ಸುಮ್ಮನೆಕೂರುವುದಿಲ್ಲ ಮತ್ತುಇಂತಹ ಸಂದರ್ಭದಲ್ಲಿನಾನು ಹಾಗೂ ನನ್ನ ಸ್ನೇಹಿತರುಅಲ್ಲದೇಇಡೀ ಸಮಾಜ ಶ್ರೀರಾಮ ವಿದ್ಯಾಕೇಂದ್ರದಜೊತೆಗಿರುತ್ತದೆಎಂದುಕರ್ನಾಟಕ ಸರಕಾರದಮಾಜಿ ಸಚಿವರು ಜನಾರ್ಧನರೆಡ್ಡಿ, ಇವರುಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ ಸರಸ್ವತಿ ವಂದನಾಕಾರ್ಯಕ್ರಮದಲ್ಲಿ ಮಾತನಾಡಿದರು
ಈ ಸಂದರ್ಭದಲ್ಲಿ ಶ್ರೀ ಸಂದೀಪ್, ಪೋಸ್ಟ್‍ಕಾರ್ಡ್ ನ್ಯೂಸ್.ಕಾಮ್‍ಇದರ ಪ್ರಮುಖರು, ಶ್ರೀ ಮಹೇಶ್, ವಿಕ್ರಂ ಹೆಗ್ಡೆ-ಭಿಕ್ಷಾಂದೇಹಿ ಅಭಿಯಾನಂಠಿಠಿ ನ ಪ್ರಮುಖರು, ಶ್ರೀ ಪರ್ವತ ಶೆಟ್ಟಿ ಉದ್ಯಮಿಗಳು ಮುಂಬಯಿ, ಲಲ್ಲೇಶ್‍ರೆಡ್ಡಿ ಉದ್ಯಮಿಗಳು, ಶ್ರೀ ಸದಾನಂದ ನಾವೂರ ಉದ್ಯಮಿಗಳು ಮಂಗಳೂರು, ವಿವೇಕಾನಂದ ವಿದ್ಯಾವರ್ಧಕ ಸಂಘ ಇದರಅಧ್ಯಕ್ಷರಾದಡಾ| ಪ್ರಭಾಕರ ಭಟ್‍ಕಲ್ಲಡ್ಕ, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಮುಖ್ಯ ಶಿಕ್ಷಕರಾದ ಶ್ರೀ ರಮೇಶ್‍ಎನ್ ಉಪಸ್ಥಿತರಿದ್ದರು.
* ಉಚಿತ ನೇತ್ರಚಿಕಿತ್ಸಾ ಶಿಬಿರ
ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು, ಶ್ರೀರಾಮ ವಿದ್ಯಾಸಂಸ್ಥೆಗಳು, ಪ್ರಾಥಮಿಕಆರೋಗ್ಯಕೇಂದ್ರ ಬಾಳ್ತಿಲ ಇದರ ವತಿಯಿಂದಜಿಲ್ಲಾಅಂಧತ್ವ ನಿವಾರಣಾಸಂಸ್ಥೆ ಮಂಗಳೂರು, ಜಿಲ್ಲಾ ಸಂಚಾರಿ ನೇತ್ರಘಟಕ ಹಾಗೂ ಮಂಗಳೂರಿನ ಖ್ಯಾತಜಿಲ್ಲಾಸ್ಪತ್ರೆ ಹಾಗೂ ಕೆ.ಎಂ.ಸಿ ನೇತ್ರತಜ್ಞರತಂಡದಿಂದ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿಉಚಿತ ನೇತ್ರಚಿಕಿತ್ಸಾ ಶಿಬಿರ ನೆರವೇರಿತು.
ಕಾರ್ಯಕ್ರಮವನ್ನುಡಾ| ಗೌರಿ ಪೈ ಆನಂದಶ್ರಾಮ ಪುತ್ತೂರು ಉದ್ಘಾಟಿಸಿದರು.ಕಾರ್ಯಕ್ರಮದಅಧ್ಯಕ್ಷತೆಯನ್ನು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ ಶ್ರೀಮಾನ್ ವಹಿಸಿದರು.ಕಾರ್ಯಕ್ರಮದಲ್ಲಿಡಾ| ಟೀನಾ, ಕೆ.ಎಂ.ಸಿ ಮಂಗಳೂರು, ಶ್ರೀಮತಿ ಸವಿತಾಕುಲಕರ್ಣಿಜಿಲ್ಲಾ ವೆನ್ಲಾಕ್‍ಆಸ್ಪತ್ರೆ ಮಂಗಳೂರು, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್‍ಎನ್ ಉಪಸ್ಥಿತರಿದ್ದರು.
ಶ್ರೀ ಶಾಂತರಾಜ್, ನೇತ್ರಾಧಿಕಾರಿ ಬಂಟ್ವಾಳ ಸರಕಾರಿಆರೋಗ್ಯಕೇಂದ್ರಕಾರ್ಯಕ್ರಮದಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಶ್ರೀ ಮನೋಜ್, ಸಹಶಿಕ್ಷಕರು ಸ್ವಾಗತಿಸಿ, ನಿರೂಪಿಸಿ, ಶ್ರೀ ಜಿನ್ನಪ್ಪ ಏಳ್ತಿಮಾರ್ ವಂದಿಸಿದರು.
