ಫರಂಗಿಪೇಟೆ: ಸುಜೇರು ಶ್ರೀ ಅರಸು ವೈದ್ಯನಾಥ ಧೂಮಾವತಿ ಬಂಟ ದೈವಸ್ಥಾನದ ಭಂಡಾರದ ಮನೆಯ ಬ್ರಹ್ಮಕಲಶಾಭಿಷೇಕದ ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ಸೋಮವಾರ ಮಾಣಿಲ ಶ್ರೀ ಧಾಮ ಶ್ರೀ ಮೋಹನದಾಸ ಸ್ವಾಮಿಜಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಐತಪ್ಪಆಳ್ವ, ಪ್ರಕಾಶ್ ಚಂದ್ರ ರೈ ದೇವಸ್ಯ, ತಾರಾನಾಥ ಕೊಟ್ಟಾರಿ, ದೈವದ ಪಾತ್ರಿ ಮುಂಡ ಯಾನೆ ಮೋನಪ್ಪ ಪೂಜಾರಿ, ಸುಂದರ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಸುಜೇರು ಮತ್ತಿತರರು ಉಪಸ್ಥಿತರಿದ್ದರು.

