ಫರಂಗಿಪೇಟೆ :ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ನಲ್ಲಿ ಪಿ.ಡಿ.ಒ ಅಧಿಕಾರಿಯಾದ ಶ್ರೀಮತಿ ಸವಿತಾ .ಜೆ.ಸಾಲ್ಯಾನ್ ರವರು ವರ್ಗಾವಣೆಗೊಂಡಿದ್ದು ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಚಂದ್ರಾವತಿಯವರು ನೇಮಕಗೊಂಡಿದ್ದರೂ ಅಧಿಕಾರ ಹಸ್ತಾಂತರಗೊಳಿಸದೆ ಸತಾಯಿಸುತ್ತಿದ್ದರು.ಇದರಿಂದ ಪಂಚಾಯತ್‍ನಲ್ಲಿ ಯಾವುದೇ ಕೆಲಸವಾಗದೆ ಬೇಸತ್ತ ಗ್ರಾಮಸ್ಥರು ಆಕ್ರೋಶಗೊಂಡು ಪಂಚಾಯತ್ ಕಛೇರಿ ಎದುರು ಪ್ರತಿಭಟನೆ ಮಾಡಿದರು.
ಕಳೆದ 20 ದಿವಸಗಳ ಹಿಂದೆ ಪಿ.ಡಿ.ಒ ರವರು ಪುತ್ತಿಗೆ ಗಾಮಪಂಚಾಯತ್‍ಗೆ ವರ್ಗಾವಣೆಗೊಂಡಿದ್ದರೂ ಅವರು ಸ್ಥಾನ ಬಿಟ್ಟುಕೊಡದೆ ಅಧಿಕಾರ ಹಸ್ತಾಂತರ ಮಾಡದೆ ಸತಾಯಿಸುತ್ತಿದ್ದರು.ಪುದು ಗ್ರಾಮ ಪಂಚಾಯತ್‍ಗೆ ವರ್ಗಾವಣೆಗೊಂಡ ಚಂದ್ರಾವತಿಯವರು ಅಸಹಾಯಕರಾಗಿದ್ದರು.9/11 ಗೆ ಅರ್ಜಿ ಹಾಕಿದ್ದ ಶ್ರೀ ನಾಗೇಶ್ ಕೊಟ್ಟಾರಿಯವರು ಇಂದು ಕೂಡಾ ಈ ಬಗ್ಗೆ ವಿಚಾರಿಸುವಾಗ ನಿರ್ಗಮನ ಪಿ.ಡಿ.ಒ ರವರು ರಜೆ ಮೇಲೆ ತೆರಳಿರುವುದು ಕಂಡುಬಂತು ಪಂಚಾಯತ್ ಅವರಿಗೆ ಯಾವುದೇ ಸ್ಪಂದನೆ ಸಿಗದೆ ಬೇಸತ್ತ ಹಿನ್ನೆಲೆಯಲ್ಲಿ ಅವರು ಪಂಚಾಯತ್ ಕಛೇರಿ ಬಾಗಿಲಲ್ಲಿ ಕೂತು ಪ್ರತಿಭಟಿಸಿದರು.ಗ್ರಾಮಸ್ಥರಾದ ಸುಬ್ರಹ್ಮಣ್ಯ ರಾವ್,ಪ್ರವೀಣ್ ಶೆಟ್ಟಿ ಸುಜೀರು, ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ,ಮನೋಜ್ ಆಚಾರ್ಯ ,ಅಶ್ರಫ್ ಫರಂಗಿಪೇಟೆ, ವಿಠ್ಠಲ್ ಸಾಲ್ಯಾನ್, ಹನೀಫ್ ಅಮೆಮಾರ್, ಗಣೇಶ್ ದತ್ತನಗರ ಧೀರಜ್ ಮಾರಿಪಳ್ಳ, ಜಯ ದತ್ತನಗರ,ಭಾಸ್ಕರ ಚೌಟ ,ಆನಂದ ಆಳ್ವ ಮತ್ತಿತರರು ಅವರೊಂದಿಗೆ ಸಹಕರಿಸಿದರು.
ಬಂಟ್ವಾಳ ತಾಲೂಕು ಕಾರ್ಯನಿರ್ವಾಹಣಾಧೀಕಾರಿಗಳ ಗಮನಕ್ಕೆ ಈ ವಿಚಾರ ತಿಳಿಸಲಾಗಿ ಅವರ ನಿರ್ಧೇಶನದಂತೆ ಬಂಟ್ವಾಳ ತಾಲೂಕು ಪಂಚಾಯತ್ ಸಹಾಯಕ ನಿರ್ಧೇಶಕರಾದ ದಯಾವತಿಯವರು ಪ್ರತಿಭಟನಾನಿರತರಲ್ಲಿ ಸಂದಾನ ಮಾಡಿ ಮನ ಒಲಿಸಿ ಮನವಿ ಸ್ವೀಕರಿಸಿದರು.
