ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತಕ್ಕೆ 25.70 ಲಕ್ಷ ರೂ. ನಿವ್ವಳ ಲಾಭ: ಸುಬ್ರಹ್ಮಣ್ಯ ರಾವ್
ಬಂಟ್ವಾಳ: ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ 2023-24 ನೇ ಸಾಲಿನಲ್ಲಿ ಒಟ್ಟು 83.51 ಕೋ.ರೂ.ವ್ಯವಹಾರ ನಡೆಸಿ 25.70 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಿ ಸುಬ್ರಮಣ್ಯ ರಾವ್ ಹೊಯ್ಗೆಗದ್ದೆ ತಿಳಿಸಿದ್ದಾರೆ.

ಗುರುವಾರ ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸದಸ್ಯರಿಗೆ ಶೇ.10 ಡಿವಿಡೆಂಟನ್ನು ಘೋಷಿಸಿದರು.ಪ್ರಸಕ್ತ ಸಾಲಿನಲ್ಲಿ ನಮ್ಮ ಸಂಸ್ಥೆಯು ಗಮನಾರ್ಹ ಪ್ರಗತಿಯನ್ನು ಸಾದಿಸಿದ್ದು, ಕಳೆದ ವರ್ಷಾಂತ್ಯಕ್ಕೆ ಇದ್ದ ಠೇವಣಿಯಲ್ಲು ಏರಿಕೆಯಾಗಿದೆ.
ಸುಮಾರು11ಕೋ.ರೂ. ಸಾಲ ಹೊರಬಾಕಿ ಇದ್ದು,ದುಡಿಯುವ ಬಂಡವಾಳ 20.53 ಕೋಟಿಯಿಂದ 20.79 ಕೋ.ರೂ.ವಿಗೆ ಹೆಚ್ಚಳವಾಗಿದೆ. ಸಂಘದ ಆಡಿಟ್ ವರ್ಗಿಕರಣದಲ್ಲಿ’ ಬಿ’ ತರಗತಿಯ ಸ್ಥಾನ ಪಡೆದಿರುತ್ತದೆ , ಸಾಲ ವಸೂಲಾತಿ 93.6 % ಪ್ರಗತಿ ದಾಖಲಿಸಿದೆ ಎಂದು ಅವರು ವಿವರಿಸಿದರು.
ಸಂಘದ ಉಪಾಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪುಂಚಮೆ , ನಿರ್ದೇಶಕರುಗಳಾದ ಪ್ರತಾಪ್ ಕುಮಾರ್ ಆಳ್ವ , ಜೀವನ್ ಪ್ರಕಾಶ್ ಡಿ ಸೋಜಾ ಬಡ್ಡೂರು , ಗಂಗಾಧರ ಪೂಜಾರಿ ಅಬ್ಬೆಟ್ಟು , ಸಂತೋಷ್ ಕುಮಾರ್ ನೆತ್ತರಕೆರೆ , ವೆಂಕಪ್ಪ ಕುಮ್ಡೇಲು , ಶೈಲಜಾ ಪಿ ಶೆಟ್ಟಿ , ವಸಂತಿ ಕೆ ಕಿದೆಬೆಟ್ಟು , ಹರೀಶ್ ಕುಮಾರ್ ಕೊಡ್ಮಾಣ್ , ಪುರುಷೋತ್ತಮ ಅಬ್ಬೆಟ್ಟು , ರಮೇಶ್ ಬಂಗೇರ ಎಂಪೆದ ಗುರಿ , ಜಯಾನಂದ ನಾಯ್ಕ್ ಕುಮ್ಡೇಲು ವೇದಿಕೆಯಲ್ಲಿದ್ದರು.
ಮುಖ್ಯ ಕಾರ್ಯನಿರ್ವಹಾಣಾದಿಕಾರಿ ಕಮಲಾ ಬಿ.ಯವರು ವರದಿ ವಾಚಿಸಿದರು.