ಫರಂಗಿಪೇಟೆ: ರಂಗ ಕಲಾವಿದನಿಗೆ ಸನ್ಮಾನ
ಬಂಟ್ವಾಳ:ಇಲ್ಲಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ವತಿಯಿಂದ ಬುಧವಾರ ಸಂಜೆ ನಡೆದ ಶಿವಧೂತೆ ಗುಳಿಗೆ ನಾಟಕ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಇವರನ್ನು ಬುಧವಾರ ಸನ್ಮಾನಿಸಿದರು. ಕಲಾವಿದ ಮಂಜು ವಿಟ್ಲ ಸನ್ಮಾನಿತರನ್ನು ಪರಿಚಯಿಸಿದರು.
ಬಂಟ್ವಾಳ ಕಸಾಪ ಅಧ್ಯಕ್ಷ ಕೆ.ಮೋಹನ್ ರಾವ್, ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ಸೇವಾಂಜಲಿ ಪ್ರತಿಷ್ಠಾನದ ಕೋಶಾಧಿಕಾರಿ ಅರ್ಕುಳ ಗೋವಿಂದ ಶೆಣೈ, ಪ್ರಮುಖರಾದ ಕಂಪ ಸದಾನಂದ ಆಳ್ವ, ಪ್ರಕಾಶ್ವಂದ್ರ ರೈ ದೇವಸ್ಯ, ಅರ್ಜುನ್ ಪೂಂಜಾ, ಕಲಾವಿದ ಚಿ. ರಮೇಶ್, ಸುಜಾತ ಅರ್ಕುಳ ಬಂಗುಲೆ ಇದ್ದರು.
ಆಡಳಿತ ಟ್ರಸ್ಟಿ ಕೆ.ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ಕೊಡ್ಮಾಣ್ ದೇವದಾಸ್ ಶೆಟ್ಟಿ ವಂದಿಸಿದರು. ತಾರಾನಾಥ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು.