ತ್ರಿಶಾ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಅವರ ಮೇಲೆ ಹಲ್ಲೆ,ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಛಾಯಾಗ್ರಾಹಕರಿಂದ ಖಂಡನೆ
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಶನ್ ಬಂಟ್ವಾಳ ವಲಯದ ಸಕ್ರೀಯ ಸದಸ್ಯ ಫರಂಗಿಪೇಟೆಯಲ್ಲಿರುವ ಸ್ಟುಡಿಯೋ ಮಾಲಕ ದಿನೇಶ್ ಕೊಟ್ಟಿಂಜ ಇವರ ಫೋಟೋ ಸ್ಟುಡಿಯೋಗೆ ನುಗ್ಗಿ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ದುಷ್ಕರ್ಮಿಗಳ ಈ ಕೃತ್ಯವನ್ನು ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಸಮಸ್ತ ಛಾಯಾಗ್ರಾಹಕರು ಒಕ್ಕೊರೊಲಿನಿಂದ ಖಂಡಿಸಿರುತ್ತಾರೆ.
ಖಂಡನೆ: ಅತೀ ಶೀಘ್ರವಾಗಿ ಈ ಕೃತ್ಯವನ್ನು ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗು ಪೊಲೀಸ್ ಇಲಾಖೆಗೆ ಮನವಿ ಮಾಡುತ್ತಿದ್ದೇವೆ. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಷಿಯೇಶನ್ ಜಿಲ್ಲಾಧ್ಯಕ್ಷ ಕರಂದಾಡಿ ಶ್ರೀಧರ್ ಶೆಟ್ಟಿಗಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.