ಬಂಗೇರ ತರವಾಡು ಮನೆಯ ಗ್ರಹಪ್ರವೇಶ ಗಾಣ ಪ್ರತಿಷ್ಠೆ ಮತ್ತು ಕಲಶಾಭಿಷೇಕ
ಇನೋಳಿ: ಶ್ರೀ ಗಾಣದ ಕೊಟ್ಯ ಬಂಗೇರ ತರವಾಡು ಇಲ್ಲಿ ನೂತನವಾಗಿ ನಿರ್ಮಾಣಗೊಂಡ ತರವಾಡು ಮನೆಯ ಗ್ರಹಪ್ರವೇಶ ಗಾಣ ಪ್ರತಿಷ್ಠೆ ಶ್ರೀ ರಾಜರಾಜೇಶ್ವರೀ ಹಾಗೂ ಶ್ರೀ ವೀರಭದ್ರಸ್ವಾಮಿ ಮತ್ತು ಸಹಪರಿವಾರ ದೈವಗಳ ಪನಃ ಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಾ.30 ಮಂಗಳವಾರದಿಂದ ಎ. 1 ಗುರುವಾರದವರೆಗೆ ನಡೆಯಲಿದೆ. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಅರವಾತ್ ಶ್ರೀ ದಾಮೋದರ ತಂತ್ರಿಯರ್ವರ ನೇತ್ರತ್ವದಲ್ಲಿ ವಿವಿಧ ವೈಧಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿದ ಜರಗಲಿರುವುದು.
ಕಾರ್ಯಕ್ರಮ:
ಮಾ ೩೦ ಮಂಗಳವಾರ ತಂತ್ರಿಯವರಿಗೆ ಪೂರ್ಣಕುಂಭ ಸ್ವಾಗತ, ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹ ಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ.ಮಾ ೩೧ ತ್ರಿಕಾಲ ಪೂಜೆ, ಗಣಪತಿ ಹೋಮ, ಸ್ಥಳ ಶುದ್ಧಿ, ಬಿಂಬ ಶುದ್ಧಿ, ಕುಂಬೇಶ ಕರ್ಕರಿ ಪೂಜೆ, ಶಯ್ಯ ಪೂಜೆ, ಜೀವ್ಯೋ ಉದ್ವಾಸನೆ, ಜೀವಕಳಸ, ಶಯ್ಯಾಗಮನ.ಬೆಳಿಗ್ಗೆ ೦೬.೩೦ರಿಂದ ೦೭.೧೪ರೊಳಗೆ ಸ್ವಾತಿ ನಕ್ಷತ್ರ ಮೀನ ಲಗ್ನದ ಶುಭಮುಹೂರ್ತದಲ್ಲಿ ಗ್ರಹಪ್ರವೇಶ ಗಾಣದ ಪ್ರತಿಷ್ಠೆ ನಡೆಯಲಿದೆ ಎಂದು ಬಂಗೇರ ತರವಾಡು ಕುಟುಂಬಿಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.