ಬಂಟ್ವಾಳ: ಕತಾರ್ ತುಳುಕೂಟ ಸಮಾಜ ಸೇವೆಗಾಗಿ ಕೊಡಮಾಡುವ ತುಳುನಾಡ ಬೊಲ್ಪು ಪ್ರಶಸ್ತಿಗೆ ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಸೇವಾರತ್ನ ಕೃಷ್ಣಕುಮಾರ್ ಪೂಂಜಾ ಆಯ್ಕೆಯಾಗಿದ್ದಾರೆ. ಮೇ. 19ರಂದು ದೋಹಾ ಕತಾರ್‍ನಲ್ಲಿ ನಡೆಯುವ ತುಳುಕೂಟ ವಾರ್ಷಿಕೋತ್ಸವದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಹರೇಕಳ ಹಾಜಬ್ಬ, ಸುನೀಲ್ ಡಿಸೋಜಾ ಅವರು ಕೂಡ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಕತಾರಿನಲ್ಲಿ ಭಾರತದ ರಾಯಭಾರಿ ಪಿ.ಕುಮಾರನ್, ಮಣಿಪಾಲ ವಿಶ್ವವಿದ್ಯಾನಿಲಯದ ಸಹ ಕುಲಪತಿ ಡಾ. ಎಚ್.ಎಸ್. ಬಳ್ಳಾಲ್, ದೋಹಾ ಬ್ಯಾಂಕ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್.ಸೀತಾರಾಮನ್, ದೋಹಾ ಕತಾರ್‍ನ ಇಂಡಿಯನ್ ಕಲ್ಚರಲ್ ಸೆಂಟರ್‍ನ ಅಧ್ಯಕ್ಷೆ ಮಿಲನ್ ಅರುಣ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕೃಷ್ಣಕುಮರ್ ಪೂಂಜಾ ಅವರು ಸೇವಾಂಜಲಿ ಪ್ರತಿಷ್ಠನದ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಉಚಿತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ಕಣ್ಣು ತಪಾಸಣ ಶಿಬಿರ, ದಂತ ಚಿಕಿತ್ಸಾ ಶಿಬಿರವನ್ನು ದಾಖಲೆ ಸಂಖ್ಯೆಯಲ್ಲಿ ಸಂಘಟಿಸಿದ್ದಾರೆ. ಇವರ ಸಾಧನೆಗಾಗಿ ಈಗಾಗಲೇ ಸೇವಾರತ್ನ ಪ್ರಶ್ಸತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ವಿಶ್ವೇಶರಯ್ಯ ದಶಮಾನೋತ್ಸವ ಪ್ರಶಸ್ತಿ, ಇಂದಿರಾಗಾಂಧಿ ಸದ್ಭಾವನ ಪ್ರಶಸ್ತಿ ಸೇರಿದಂತೆ ಹರವಾರು ಪ್ರಶಸ್ತಿ, ಸಮ್ಮಾನಗಳು ಪ್ರಾಪ್ತಿಯಾಗಿದೆ.
