ಮುಂಬಯಿ: ಮಹಾನಗರದ ಪ್ರಸಿದ್ಧ ಹಾಗೂ ಹಿರಿಯ ನ್ಯಾಯವಾದಿಯಾಗಿದ್ದು ಸುಮಾರು ಮೂರು ದಶಕಗಳಿಂದ ಮುಂಬಯಿ ಹೈಕೋರ್ಟ್‍ನಲ್ಲಿ ವಕೀಲರಾಗಿ ಶ್ರಮಿಸುತ್ತಿರುವ ಸಲಹಾ ವಕೀಲ (ಸಾಲಿಸಿಟರ್), ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಮೂಲತಃ ನ್ಯಾಯವಾದಿ ಪಿಯೂಸ್ ವಾಸ್ ಮತ್ತು ನ್ಯಾ| ಜೆನೆವೀವ್ ಪಿ.ವಾಸ್ ದಂಪತಿ ಇವರ ಮುಂಬಯಿ ಉಪನಗರದ ನೂತನ ಕಛೇರಿ ಮಲಾಡ್ ಪಶ್ಚಿಮದ ಓರ್ಲೆಮ್ ಇಲ್ಲಿನ ಗ್ರೇಸ್ ಅಪಾರ್ಟ್‍ಮೆಂಟ್‍ನ ದ್ವಿತೀಯ ಮಹಡಿಯಲ್ಲಿ ಇಂದು ಶನಿವಾರ ಪೂರ್ವಾಹ್ನ ಉದ್ಘಾಟನೆ ಗೊಂಡಿತು.

ಮುಖ್ಯ ಅತಿಥಿಯಾಗಿ ಮೋಡೆಲ್ ಕೋ.ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ ಹಾಗೂ ಗೌರವ ಅತಿಥಿಯಾಗಿ ಓರ್ಲೆಮ್‍ನ ಅವರ್ ಲೇದಿ ಆಫ್ ಲೂರ್ಡ್’ಸ್ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ಗಿಲ್ಬರ್ಟ್ ಡಿ’ಲಿಮಾ ಉಪಸ್ಥಿತರಿದ್ದು, ನೂತನ ಕಛೇರಿ ಉದ್ಘಾಟಿಸಿದರು. ಸಂಗೀತ ಅಭಿನಯ ಅಕಾಡೆಮಿಯ ನಿರ್ದೇಶಕ ಡಾ| ರೆ| ಫಾ| ಚಾಲ್ರ್ಸ್ ವಾಸ್ ಆಶೀರ್ವಾಚನಗೈದರು.

ಕಾರ್ಯಕ್ರಮದಲ್ಲಿ ವಿನ್ಸೆಂಟ್ ಮಥಾಯಸ್, ಪ್ರಮೀಳಾ ವಿ.ಮಥಾಯಸ್, ಹೆನ್ಸಿ ಲೋಬೊ, ಡೊಲ್ಫಿ ಡಿ’ಸೋಜಾ, ಲೊರೆನ್ಸ್ ಕುವೆಲ್ಲೊ, ಸುಜಾನ್ ಕುವೆಲ್ಲೊ ಮತ್ತಿತರರು ಉಪಸ್ಥಿತರಿದ್ದರು.

ನ್ಯಾ| ಡೆರ್ರಿಲ್ ಪಿ.ವಾಸ್, ನ್ಯಾ| ಚೈತಾಲ್ ಡಿ.ವಾಸ್, ನ್ಯಾ| ಜೈಸನ್ ಪಿ.ವಾಸ್, ನ್ಯಾ| ಪಿಯೋನಾ ನಜ್ರರೆತ್ ಉಪಸ್ಥಿತರಿದ್ದು, ನ್ಯಾಯವಾದಿ ಪಿಯೂಸ್ ವಾಸ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಡಾ| ಕವಿತಾ ಜೆ. ವಾಸ್ ಪ್ರಾರ್ಥನೆಯನ್ನಾಡಿದರು. ನ್ಯಾ| ಜೆನೆವೀವ್ ಪಿ.ವಾಸ್ ವಂದನಾರ್ಪಣೆಗೈದರು.


