ಮುಂಬಯಿ: ಪುಸ್ತಕ ಬರೆಯುವುದೇ ದೊಡ್ಡ ದಿಗ್ಭ್ರಾಂತಿ ಆಗಿದೆ. ಭಾಷಾಂತರ ಮಹಾ ಸಂಕಟದ ಕಾಯಕವಾಗಿದೆ. ಭಾಷೆಯ ಹಿಡಿತ ಇದಕ್ಕೆ ಮುಖ್ಯವಾಗಿದೆ. ಭಾಷಾ ಹಿನ್ನಲೆಯ ಭಾಗ ಅನುವಾದಕರಲ್ಲಿ ಸ್ವಷ್ಟವಾಗಿದ್ದಾಗ ಅನುವಾದ ಕೃತಿಗಳು ಸ್ವಾರಸ್ಯಕರವಾಗಿ ಮೂಡುವುದು. ವಿಮಲ ಅವರ ಈ ಕೃತಿ ಇತರೇ ಭಾಷೆಗಳಲ್ಲಿ ಮರು ಭಾಷಾಂತರವಾಗಿ ಈ ಕೃತಿ ಮೌಲ್ಯಯುತವಾಗಿ ಪ್ರಕಾಶಿಸಲಿ ಎಂದು ಭಾರತ ರಾಷ್ಟ್ರದ ಸರ್ವೋಚ್ಛ ನ್ಯಾಯಲಯದ ನಿವೃತ್ತ ನ್ಯಾಯಧೀಶ ಜಸ್ಟಿಸ್ ಬಿ.ಎನ್ ಶ್ರೀಕೃಷ್ಣ ತಿಳಿಸಿದರು.

k-3

ಇಂದಿಲ್ಲಿ ಶುಕ್ರವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಸಭಾಂಗಣದಲ್ಲಿ ಸೃಜನಾ ಬಳಗ ಮುಂಬಯಿ ಆಯೋಜಿಸಿದ್ದ ಕೃತಿಗಳ ಅನಾವರಣ ಮತ್ತು ಕೃತಿ ಸಮೀಕ್ಷೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಜಸ್ಟಿಸ್ ಶ್ರೀಕೃಷ್ಣ ಮಾತನಾಡಿದರು.k-2

ಕಾರ್ಯಕ್ರಮದಲ್ಲಿ ಸೃಜನಾ ಬಳಗ ಮುಂಬಯಿ ಇದರ ಲೇಖಕಿಯರ ಪ್ರಬಂಧ ಸಂಗ್ರಹ `ಮಹಿಳಾ ಜಾನಪದ’ ಕೃತಿ, ಡಾ| ಸುನೀತಾ ಎಂ.ಶೆಟ್ಟಿ ಅವರ ಪ್ರವಾಸ ಕಥನ `ಸಾಗರದಾಚೆಗೆ’ ಕೃತಿ ಹಾಗೂ ಆಂಗ್ಲ ಲೇಖಕಿ ಶಾಲೆಟ್ ಬ್ರಾಂಟಿಯ ರಚಿತ ಶ್ಯಾಮಲಾ ಮಾಧವ ಅವರಿಂದ ಕನ್ನಡಾನುವಾದ `ಜೇನ್ ಏರ್‘ ಅಭಿಜಾತ ಕೃತಿ ಜಸ್ಟಿಸ್ ಶ್ರೀಕೃಷ್ಣ ಅವರು ಸಾರಸ್ವತ ಲೋಕಕ್ಕೆ ಅರ್ಪಿಸಿದರು.

ಮೈಸೂರು ಅಸೋಸಿಯೇಶನ್ ಮುಂಬಯಿ ಸಹಯೋಗದಲ್ಲಿ ಜರುಗಿಸಲ್ಪಟ್ಟ ಕಾರ್ಯಕ್ರಮದಲ್ಲಿ ಸ್ಪಾರೋ ಸಂಸ್ಥೆಯ ಮುಖ್ಯಸ್ಥೆ ಡಾ| ಸಿ.ಎಸ್ ಲಕ್ಷ್ಮೀ ಮುಖ್ಯ ಅತಿಥಿ ಆಗಿದ್ದು, ಡಾ| ಗಿರಿಜಾ ಶಾಸ್ತ್ರಿ ಹಾಗೂ ಪತ್ರಕರ್ತ ದಯಾಸಾಗರ ಚೌಟ ಕ್ರಮವಾಗಿ ಕೃತಿ ಸಮೀಕ್ಷೆಗೈದರು.

krushi

ಶ್ಯಾಮಲಾ ಒಳ್ಳೆಯ ಬರೆಯಗಾರ್ತಿ. ಸ್ತ್ರೀ ಪರ ಬರಹಗಳಿಗೆ ಮಹತ್ವ ನೀಡತ್ತಿರುವ ಮಹಿಲಾ ಸಕ್ತ ಲೇಖಕಿ. ಇವರ ಬರಹಾ ಆಸಕ್ತಿ ಇನ್ನೂ ಶಕ್ತಿಯುತವಾಗಿ ಬೆಳೆಯಲಿ ಎಂದು ಡಾ| ಲಕ್ಷ್ಮೀ ಹಾರೈಸಿದರು.

ಸುನೀತಾ ಶೆಟ್ಟಿ ಮಾತನಾಡಿ ಮಹಿಳಾ ಜಾನಪದ ಮತ್ತು ತನ್ನ ಕೃತಿ ಪ್ರವಾಸ ಕಥನ ಬಗ್ಗೆ ಮಾತನಾಡಿ ಹೊಸ ಪರಂಪರೆ ಸೃಷ್ಠಿ ಮಾಡುವಂತ ಹೆಜ್ಜೆಯನ್ನಿರಿಸಿದ್ದೇವೆ. ಕೃತಿ ಬಿಡುಗಡೆ ಬಳಿಕ ಆ ಬಗ್ಗೆ ಸುದ್ದಿ ಮಾಡುವುದಿಲ್ಲ. ಇದನ್ನು ಮನವರಿಸಿ ಕೃತಿಗಳ ಬಗ್ಗೆ ಸಮೀಕ್ಷೆ ನಡೆಸಲುದ್ದೇಶಿಸಿದ್ದೇವೆ. ಇದು ಸಾಂಕೇತಿಕ ಕೃತಿಯ ಸಾಂಕೇತಿಕ ಬಿಡುಗಡೆ ಎಂದರು.

k-4

ದಯಾಸಾಗರ್ ಚೌಟ ಮಾತನಾಡಿ ಕೃತಿಕಾರನ ಎದೆಯಂಗಳದಲ್ಲಿ ಕೃತಿ ಮೊದಲಾಗಿ ಹುಟ್ಟುವುದು. ಅನುವಾದ ಎಂದಾಗ ತಪಸ್ಸು ಎಂದಾರ್ಥ. ದುರ್ಗಾಮದ ಹಾದಿಯ ಕೃತಿಯನ್ನು ಅನುವಾದಿಸುವುದೆಂದರೆ ಹಿಮಾಲಯಕ್ಕೇರಿದಂತೆ. ವ್ಯಕ್ತಿ ಕಥನವನ್ನು ಬರೆದ ವ್ಯಕ್ತಿ ಜೇನ್‍ವರ್ ಆಗಿದ್ದರು.

k-5

ಅತಿಥಿsಗಳು ನಾರಾಯಣ ಶೆಟ್ಟಿ (ನವೀನ್ ಪ್ರಿಂಟರ್ಸ್), ಡಾ| ಜಿ.ಪಿಕುಸುಮಾ, ದಕ್ಷಾಯಿಣಿ ಯೆಡಹಳ್ಳಿ, ಶಾರದಾ ಎ.ಅಂಚನ್ ಅವರಿಗೆ ಕೃತಿ ಮತ್ತು ಪುಷ್ಫಗುಚ್ಛ ನೀಡಿ ಗೌರವಾರ್ಪಣೆಗೈದರು.

k-6

ಸಹ ಸಂಚಾಲಕಿ ವಿೂನಾ ಕಳವಾರ, ಕೋಶಾಧಿಕಾರಿ ಸುಮಾ ದ್ವಾಕರನಾಥ್ ಉಪಸ್ಥಿತರಿದ್ದು, ಸುಶೀಲಾ ಎಸ್.ದೇವಾಡಿಗ ಸ್ವಾಗತ ಗೀತೆಯನ್ನಾಡಿದರು. ಶ್ಯಾಮಲಾ ಮಾಧವ ಕೃತಿಯ ಬಗ್ಗೆ ತಿಳಿಸಿದರು. ದಾಕ್ಷಾಯಿಣಿ ಯೆಡಹಳ್ಳಿ ಪ್ರಸ್ತಾವನೆಗೈದರು. ಶಾಂತಾ ಶಾಸ್ತ್ರೀ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾರದಾ ಅಂಬೆಸಂಗೆ ವಂದನಾರ್ಪಣೆಗೈದರು.

(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

By Suddi9

Leave a Reply

Your email address will not be published. Required fields are marked *