ಪೊಳಲಿ: ಪೊಳಲಿ ರಮಕೃಷ್ಣತಪೋವನಕ್ಕೆ ಸೆ.13ರಂದು ಶನಿವಾರ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷಿನ್, ಬೇಲೂರ್ ಮಠ ಇದರ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಭೇಟಿ ನೀಡಿದರು .

ಇವರೊಂದಿಗೆ ಮೈಸೂರಿನ ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಮುಕ್ತಿದಾನಂದಜಿ ಮಹಾರಾಜ್, ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್, ರಾಮಕೃಷ್ಣ ಮಠ ಅಲ್ಸೂರು ಇದರ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಬೋಧಸ್ವರೂಪನಂದಜಿ ಮಹರಾಜ್ ಮತ್ತು ರಾಮಕೃಷ್ಣ ಮಠದ ಇತರ ಪೂಜ್ಯ ಸ್ವಾಮೀಜಿಗಳನ್ನು ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿಯವರು ಬರಮಾಡಿಕೊಂಡರು.

ಪೂಜ್ಯ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರ ಆಶೀರ್ವಾದವನ್ನು ಪಡೆದ ಸ್ಮರಣೀಯ ಘಳಿಗೆ, ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿಯುವುದು,ಇತಿಹಾಸದಲ್ಲಿ ಇದೊಂದು ವಿಶೇಷ ಘಳಿಗೆಯಾಗಿರುತ್ತದೆ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮೀಜಿಯವರು ಸಂತಷವ್ಯಕ್ತಪಡಿಸಿದರು.

ಸ್ವಾಮೀಜಿಯವರು ಎಲ್ಲಾ ಭಕ್ತಾಧಿಗಳನ್ನು ಹಾಗೂ ಆಶ್ರಮದ ವಿದ್ಯಾರ್ಥಿಗಳನ್ನು ಆಶೀರ್ವದಿಸಿದರು. ರಾಮಕೃಷ್ಣ ತಪೋವನಕ್ಕೆ ಭೇಟಿ ನೀಡಿದ ಈ ಎಲ್ಲಾ ಸಂತರು ವಿಶ್ವ ವಿಖ್ಯಾತ ಪೊಳಲಿ ಶ್ರೀ ರಾಜರಾಜೇಶ್ವರಿಯ ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿಯ ಆಶೀರ್ವಾದವನ್ನು ಕೋರಿದರು.

By suddi9

Leave a Reply

Your email address will not be published. Required fields are marked *