ಸುದ್ದಿ9 ಫರಂಗಿಪೇಟೆ: ಪುದು ಜಿಲ್ಲಾ ಪಂಚಾಯತ್ ಸದಸ್ಯೆ ಜಯಶ್ರೀ ಕೆ ಎ ಅವರು ಗ್ರಾಮ ಸ್ನೇಹಿ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳವಾರ ನೆರವೇರಿಸಿದರು.
ಅವರು ಜಿಲ್ಲಾಪಂಚಾಯತ್ ನ ಪುದು ಗ್ರಾಮ ಪಂಚಾಯತ್ಗೊಳಪಟ್ಟ ಪುದು, ಮೆರಮಜಲು, ಕರಿಯಂಗಳ ,ಬಡಗಬೆಳ್ಳೂರು ಈ ನಾಲ್ಕು ಗ್ರಾಮಗಳನ್ನು ಒಳಗೊಂಡ ಎಲ್ಲಾ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿ ಉಸ್ಮಾನ್ ಪುದು ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಪಿ.ಡಿಒ ಅಬುಬಕ್ಕರ್, ಕಾರ್ಯದಶರ್ಿ ಚಂದ್ರಾವತಿ ಮೇರಮಜಲು ಪಿಡಿಒ ರಶ್ಮಿ ಕಿಲ್ಮೆ, ಗ್ರಾಮದ ಗಣ್ಯರಾದ ಮನೋಜ್ ಆಚಾರ್ಯ ನಾಣ್ಯ, ದಿನೇಶ್ ಆರ್ ಶೆಟ್ಟಿ, ಪ್ರವೀನ್ ಕುಮಾರ್ ಶೆಟ್ಟ, ಎ ಕೆ ಗಿರೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
