ಬಂಟ್ವಾಳ; ಕಾರಿನಲ್ಲಿ ಬಂದ ತಂಡವೊಂದು ಯುವಕನೋರ್ವನನ್ನು ಕೊಚ್ಚಿ ಕೊಲೆಗೈದ ದಾರುಣ ಘಟನೆಯೊಂದು ಫರಂಗಿಪೇಟೆ ಸಮೀಪದ ಮಾರಿಪಳ್ಳದಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಬಾಳೆಕಾಯಿ ಖಾದರ್ ಎಂಬವರ ಪುತ್ರ ನೌಷಾದ್(27) ಕೊಲೆಯಾದ ಯುವಕ. ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನನೆ ವೇಳೆ ನೌಷಾದ್ ಸ್ನೇಹಿತ ಶಮೀರ್ ಎಂಬಾತನಿಗೂ ಗಾಯಗಳಾಗಿದ್ದು, ಕಾರೊಂದರಲ್ಲಿ ಬಂದ ತಂಡ ಈ ಕೃತ್ಯವೆಸಗಿ ಪರಾರಿಯಾಗಿದೆ.
ಘಟನೆ ವಿವರ;
ಮಾರಿಪಳ್ಳದ ಸುಜೀರು ಶಾಲಾ ಬಳಿಯಿರುವ ಮಸೀದಿ ಸಮೀಪ ಈ ಘಟನೆ ನಡೆದಿದೆ. ಬಾಳೆಕಾಯಿ ವ್ಯಾಪಾರ ನಡೆಸುತ್ತಿರುವ ನೌಷಾದ್ ಶನಿವಾರ ಸಂಜೆ ಮಾರಿಪಳ್ಳದ ತನ್ನ ಅಂಗಡಿಯಲ್ಲಿದ್ದ ವೇಳೆ ಈತನಿಗೆ ಫೋನ್ ಕರೆ ಬಂದಿದ್ದು, ಕರೆ ಮಾಡಿದವರು ಮಸೀದಿ ಬಳಿಗೆ ಬರಲು ತಿಳಿಸಿದರಂತೆ. ಅದರಂತೆ ನೌಷಾದ್ ತನ್ನ ಆಲ್ಟೋ ಕಾರಿನಲ್ಲಿ ಬಂದಾಗಲೇ ತಂಡ ನೌಷಾದ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿದೆ. ಇದೇ ವೇಳೆ ಅವರಿಂದ ತಪ್ಪಿಸಲು ನೌಷಾದ್ ಕಾರಿನಿಂದ ಹೊರ ಬಂದಿದ್ದು, ದುಷ್ಕಮರ್ಿಗಳು ಅಲ್ಲಿಯೂ ಯದ್ವಾತದ್ವಾ ಹಲ್ಲೆ ನಡೆಸಿದೆ. ಹಲ್ಲೆಯ ತೀವ್ರತೆಗೆ ದೇಹದೆಲ್ಲೆಡೆ ತಲವಾರಿನಿಂದ ಕಡಿದ ಗಾಯಗಳಾಗಿದ್ದು, ನೌಷಾದ್ ನ ಒಂದು ಕೈ ಬೇರ್ಪಟ್ಟಿದೆ, ವಿಪರೀತ ರಕ್ತಸ್ರಾವ ಉಂಟಾಗಿ ನೌಷಾದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನೌಷಾದ್ ಕಾರಿಗೂ ಹಾನಿಯಾಗಿದ್ದು, ಗಾಜುಗಳು ಪುಡಿಗೈದಿದೆ. ಘಟನೆಯಲ್ಲಿ ನೌಷಾದ್ ಸ್ನೇಹಿತ ಶಮೀರ್ ಎಂಬಾತನಿಗೂ ಹಲ್ಲೆಯಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಲೆಗೀಡಾಗಿರುವ ನೌಷಾದ್ 2011 ರಲ್ಲಿ ನಡೆದಿದ್ದ ನೂರುದ್ದೀನ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ರಿಕ್ಷಾ ಚಾಲಕ ರಶೀದ್ ಕೊಲೆಯತ್ನ ಸೇರಿಂದತೆ ಆರುಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಎದುರಿಸುತ್ತಿದ್ದ. ಈ ಹಿನ್ನೆಲೆಯಲ್ಲಿ ದುಷ್ಕಮರ್ಿಗಳ ನೌಷಾದ್ ಮೇಲೆ ತಲವಾರಿನಿಂದ ಹಲ್ಲೆ ನಡೆಸಿ ಕೊಲೆಗೈದಿರಬಹುದು ಎಂದು ಶಂಕಿಸಲಾಗಿದೆ.
ತಲವಾರು ಪತ್ತೆ.
ಆರೋಪಿಗಳು ಕಾರಿನಲ್ಲಿ ಬಂದು ಈ ಕೊಲೆ ಗೈದಿದ್ದಾರೆ ಎಂದು ಹೇಳಲಾಗಿದ್ದರೂ, ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರು ಯಾವುದು ಎಂಬುದು ಇನ್ನೂ ಗೊತ್ತಾಗಿಲ್ಲ. ಈ ನಡುವೆ ಕೃತ್ಯಕ್ಕೆ ಬಳಸಿದ ತಲವಾರು ಘಟನಾ ಸ್ಥಳಕ್ಕೆ ಹತ್ತಿರದಲ್ಲಿಯೇ ಪತ್ತೆಯಾಗಿದ್ದು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿ ಬಂದ ತಂಡ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ವೆಸಗಿದೆ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಬೆಳ್ಳಿಯಪ್ಪ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ

By Suddi9

Leave a Reply

Your email address will not be published. Required fields are marked *