ಬಜಪೆ: ಮಾಜಿ ಪ್ರಧಾನಿ ದೇವೇಗೌಡ ಅವರು ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

15vm-devegowda

15vm-devegowda-1

ದೇವಳದ ಅನುವಂಶಿಕ ಅರ್ಚಕ ಹಾಗೂ ಮೊಕ್ತೇಸರ ವಾಸುದೇವ ಅಸ್ರಣ್ಣ ಅವರು ದೇವೇಗೌಡ ಅವರಿಗೆ ಪ್ರಸಾದ ವಿತರಿಸಿ ಕ್ಷೇತ್ರದ ವತಿಯಿಂದ ಗೌರವಿಸಿದರು. ದೇವಳದ ಅರ್ಚಕ ವೆಂಕಟರಮಣ ಅಸ್ರಣ್ಣ ಉಪಸ್ಥಿತರಿದ್ದರು. ಮಾಜಿ ಸಚಿವ ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ, ಜೆಡಿಎಸ್ ಪ್ರಮುಖರಾದ ಫಾರೂಕ್, ಅಶ್ವಿನಿ ಪಿರೇರಾ, ಸಂಜೀವ, ಮಧು ಬಂಗಾರಪ್ಪ, ಇಬ್ರಾಹಿಂ ಮುಂತಾದವರು ಜತೆಗಿದ್ದರು.

By Suddi9

Leave a Reply

Your email address will not be published. Required fields are marked *