ಬಜಪೆ: ‘ಯಕ್ಷಗಾನವನ್ನು ಶಾಸ್ತ್ರೀಯವಾಗಿ ಉಳಿಸಿಕೊಳ್ಳಲು ಮಕ್ಕಳಿಗೆ ಎಳೆಯ ಹರೆಯದಲ್ಲೇ ಯಕ್ಷ-ಶಿಕ್ಷಣ ನೀಡುವ ಪರಿಪಾಠ ಉತ್ತಮ ಬೆಳವಣಿಗೆ. ಅಲ್ಲದೆ ಯಕ್ಷಗಾನದ ಬಗ್ಗೆ ಸಾರ್ವತ್ರಿಕವಾಗಿ ಆಸಕ್ತಿಯನ್ನು ದ್ವಿಗುಣಗೊಳಿಸುವ ಶಕ್ತಿ ಮಕ್ಕಳ ಯಕ್ಷಗಾನಕ್ಕಿದೆ’ ಎಂದು ಕಟೀಲು ಮೇಳದ ಹಿರಿಯ ಮದ್ದಲೆಗಾರ ಪೆರುವಾಯ ನಾರಾಯಣ ಭಟ್ ಹೇಳಿದರು.
ಅವರು ಕಟೀಲು ಸರಸ್ವತೀ ಸದನದಲ್ಲಿ ಶುಕ್ರವಾರ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ ಕಲಾಪರ್ವದ ಸಂದರ್ಭ ಜರಗಿದ ಸಭಾಪರ್ವದಲ್ಲಿ ‘ಶ್ರಿ ದುರ್ಗಾ ಮಕ್ಕಳ ಮೇಳ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಇದೇ ಸಂದರ್ಭ ಹಿರಿಯ ಭಾಗವತ ಸಂಜೀವ ಶೆಟ್ಟಿ ಕೊಡೆತ್ತೂರು ಅವರಿಗೆ ಗೌರವಾರ್ಪಣೆ ನೀಡಿ ಸನ್ಮಾನಿಸಲಾಯಿತು. ದುರ್ಗಾ ಮಕ್ಕಳ ಮೇಳದ ಗುರುಗಳಾದ ಸರ್ಪಂಗಳ ಈಶ್ವರ ಭಟ್, ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯ ಹಾಗೂ ರಾಜೇಶ್ ಐ ಕಟೀಲು ಅವರಿಗೆ ಗುರುವಂದನೆಯ ಗೌರವಾರ್ಪಣೆ ಸಲ್ಲಿಸಲಾುತು. ಸಮಾರಂಭ ಉದ್ಯಮಿ
ಜಗದೀಪ್ ಡಿ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಜರಗಿತು. ದೇವಳದ ಅನುವಂಶಿಕ ಅರ್ಚಕ ಕೆ. ಲಕ್ಷ್ಮೀನಾರಾಯಣ ಅಸ್ರಣ್ಣ ಅವರು ಆಶೀರ್ವಚನವಿತ್ತು ಮಾತನಾಡಿ – ‘ಎಳೆಯ ಮಕ್ಕಳಿಗೆ ಯಕ್ಷಗಾನದ ಸಮಗ್ರತೆಯನ್ನು ಬೋಸಿ ಕಲಾವಿದರನ್ನಾಗಿ ರೂಪಿಸಿದ ದುರ್ಗಾ ಮಕ್ಕಳ ಮೇಳದ ಕಾರ್ಯ ನಿಜಕ್ಕೂ ಶ್ಲಾಘನೀಯ’ ಎಂದರು.
ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿಗಳು ಶುಭಾಶಂಸನೆಗೈದರು. ಉದ್ಯಮಿ ರಘುವೀರ್ ಶೆಟ್ಟಿ ದೀಪ ಪ್ರಜ್ವಲನಗೊಳಿಸಿ ಸಭಾ ಪರ್ವಕ್ಕೆ ಚಾಲನೆ ನೀಡಿದರು. ಉದ್ಯಮಿಗಳಾದ ಗಣೇಶ್ ಶೆಟ್ಟಿ ಐಕಳ, ಅಶೋಕ್ ಶೆಟ್ಟಿ ಕಲ್ಪವೃಕ್ಷ, ಮುಂಚೂರು ಗುಣಪಾಲ ಶೆಟ್ಟಿ, ಶ್ರೀಧರ ಶೆಟ್ಟಿ ಗುಬ್ಯ, ಆನಂದ ಪ್ರಭು, ಜಗದೀಶ್ ಶೆಟ್ಟಿ, ಖಂಡಿಗೆಬೀಡು ದಯಾನಂದ ಶೆಟ್ಟಿ, ಸುರೇಶ್ ಹೆಗ್ಡೆ, ಪೆರ್ಮುದೆ ಹರೀಶ್ ಶೆಟ್ಟಿ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿ ಪ್ರಸಾದ್ ಶೆಟ್ಟಿ, ವಕೀಲ ಅರುಣ್ ಬಂಗೇರ, ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ತಾರನಾಥ ಬಲ್ಯಾಯ ವರ್ಕಾಡಿ ರಾಧಾ ಅಮೀನ್ ಪಂಚಾಯತಿರಾಜ್ ಇಲಾಖೆಯ ಸಹಾಯಕ ಕಾರ್ಯಕಾರಿ ಎಂಜಿನಿಯರ್ ಸುಜನ್‍ಚಂದ್ರರಾವ್ ಅವರುಗಳು ಉಪಸ್ಥಿತರಿದ್ದರು.
ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರೀಹರಿನಾರಾಯಣ ಆಸ್ರಣ್ಣ ಅವರು ಅಭಿನಂದನಾ ಭಾಷಣಗೈದು ಸ್ವಾಗತಿಸಿದರು. ಮೇಳದ ಸ್ಥಾಪಕ ಟ್ರಸ್ಟಿ-ಗುರು ಪಿ ಕೃಷ್ಣ ಭಟ್ ಅವರ ಸಂಸ್ಕರಣೆ ಈ ಸಂದರ್ಭ ನಡೆಯಿತು. ದೇವಿಪ್ರಕಾಶ್ ಮತ್ತು ಬಳಗ ಭಾಗವತಿಕೆಯ ಮೂಲಕ ಅಭಿನಂದನೆಯ ಮೂಲಕ ಸನ್ಮಾನ ಪತ್ರ ಭಿನ್ನವತ್ತಳೆಯ ಗಾಯನ ಹಾಗೂ ಕಲಾವಿದ ವಾದಿರಾಜ ಕಲ್ಲೂರಾಯ ಅವರಿಂದ ವಾಚನ ನಡೆಯಿತು. ಮೇಳದ ಟ್ರಸ್ಟಿಗಳಾದ ರಾಘವೇಂದ್ರ ಆಚಾರ್ಯ, ಪಶುಪತಿ ಶಾಸ್ತ್ರಿ, ದಯಾನಂದ ಮಾಡ, ರಾಜೇಶ್ ಐ, ಕೃಷ್ಣ ಕೆ.ಅವರು ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

