ಬಜಪೆ: “ಯಕ್ಷಗಾನಕ್ಕೆ ಅಳಿವಿನ ಭೀತಿ ಇಲ್ಲ ಎಂಬುದು ಪ್ರಸ್ತುತ ಕಟೀಲು ಸೇರಿದಂತೆ ನಾಡಿನಾದ್ಯಂತ ಮಕ್ಕಳಿಗೆ ನೀಡಲಾಗುತ್ತಿರುವ ಯಕ್ಷಶಿಕ್ಷಣ ಹಾಗೂ ತದನಂತರದ ಸಕಾರಾತ್ಮಕ ಬೆಳವಣಿಗೆಯಿಂದ ದೃಢಪಟ್ಟಿದೆ. ಯಕ್ಷಗಾನಕ್ಕೆ ಆಸಕ್ತರನ್ನು ಚಿತ್ರ್ರಿಸುವ ಅಗತ್ಯವಿಲ್ಲ ಎಂಬುದಕ್ಕೆ ಯಾವುದೇ ಗಿಮಿಕ್‍ಗಳಿಲ್ಲದೆ ಕೇವಲ ಪೌರಾಣಿಕ ಪ್ರಸಂಗ ಪ್ರಸ್ತುತಿಯಿಂದಲೇ ಕಟೀಲು ಮೇಳಗಳ ಯಕ್ಷಗಾನ ಆಸಕ್ತರ ಸಂಖ್ಯೆ ಹೆಚ್ಚಿರುವುದೇ ಸಾಕ್ಷಿ . ಕಲಾವಿದರ ಬದುಕಿನಲ್ಲೂ ಬಡತನ ಎಂಬುದು ಬಹಳಷ್ಟು ಮಟ್ಟಿಗೆ ಕಡಿಮೆಯೆನಿಸುತ್ತದೆ. ಅಲ್ಲದೆ ಯಕ್ಷಗಾನದಲ್ಲಿನ ಮೌಲ್ಯಗಳು, ಭಾವನಾತ್ಮಕ ಸಂಬಂಧಗಳು ಸಮಾಜದಲ್ಲಿ ನಮ್ಮನ್ನು ದುಸಂಸ್ಕøತರನ್ನಾಗಿಸುತ್ತದೆ” ಎಂದು ಸಂಸದ ನಳಿನ್ ಕುಮಾರ್ ಕಟೀಲು ಅವರು ಹೇಳಿದರು.

ಸುಸಂಕೃತ ಸಮಾಜದ ಜಾಗೃತಿಗೆ ಯಕ್ಷಗಾನ ಪರಿಣಾಮಕಾರಿ ಮಾಧ್ಯಮ ;ಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ ಕಲಾಪರ್ವ, ಪ್ರಶಸ್ತಿ ಪ್ರಧಾನ, ಗೌರಾವಾರ್ಪಣೆ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ : ಸಂಸದ ನಳಿನ್ ಕುಮಾರ್ ಕಟೀಲು
16-vm-kalaparva

ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಶನಿವಾರ ಜರಗಿದ ಕಟೀಲು ಶ್ರೀ ದುರ್ಗಾಮಕ್ಕಳ ಮೇಳದ ಮೂರು ದಿನಗಳ ಅಷ್ಟಮ ವಾರ್ಷಿಕ ಕಲಾಪರ್ವದ ಎರಡನೇ ದಿನದ ಸಭಾ ಪರ್ವದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಅವರಿಗೆ ‘ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ’ಯನ್ನು ಪ್ರಧಾನ ಮಾಡಿ ಗೌರವಿಸಿ ಮಾತನಾಡಿದರು. ಇಲ್ಲಿ ಯಕ್ಷಗಾನ ಕಲಿಯುವ ಎಲ್ಲಾ ಮಕ್ಕಳು ತಮ್ಮ ಶೈಕ್ಷಣಿಕ ಸಾಧನೆಯಲ್ಲೂ ಅತ್ಯುತ್ತಮ ಸಾಧನೆಗೈಯುತ್ತಿರುವುದು ಶ್ಲಾಘನೀಯ. ನಾನು ಕಟೀಲು ಶಾಲೆಗಳಲ್ಲಿ ಕಲಿಯುತ್ತಿದ್ದರೆ ಉತ್ತಮ ಯಕ್ಷಗಾನ ಕಲಾವಿದನಾಗುತ್ತಿದ್ದೆನೇನೋ ಎಂದೆಣಿಸುತ್ತದೆ ಎಂದು ಅವರು ಹೇಳಿದರು.

ಪ್ರಶಸ್ತಿ ಸ್ವೀಕರಿಸಿದ ಹಿರಿಯ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ ಅವರು ಮಾತನಾಡಿ “ಹೆಣ್ಣು-ಗಂಡು ಬೇಧವಿಲ್ಲ ಮಕ್ಕಳಿಗೆ ಎಳೆಯ ಹರೆಯದಲ್ಲೇ, ಯಕ್ಷಗಾನದ ಶಾಸ್ತ್ರೀಯ ಚೌಕಟ್ಟು ಹಾಗೂ ಪರಿಭಾಷೆಯನ್ನು ಬೋಧಿಸಿದರೆ ಭವಿಷ್ಯದ ದಿನಗಳಲ್ಲಿ ಯಕ್ಷಗಾನ ರಂಗಕ್ಕೆ ಉತ್ತಮ ಕಲಾವಿದರ ಕೊರತೆಯಾಗದು” ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಾರ್ಕೂರಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಮುಕ್ತೇಸರಾದ ಕಡಂದಲೆ ಸುರೇಶ್ ಭಂಡಾರಿ ಅವರು ವಹಿಸಿದ್ದರು. ದೇವಳದ ಅನುವಂಶಿಕ ಅರ್ಚಕ ಹಾಗೂ ಮುಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರುಗಳಾದ ವೆಂಕಟರಮಣ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ ಅವರುಗಳು ಆಶೀರ್ವಚನ ಗೈದರು.

ಇದೇ ಸಂದರ್ಭ ಯಕ್ಷಗಾನ ಕಲಾವಿದ ಕೆ. ಪ್ರಭಾಕರ ರಾವ್ ಕೊಳಂಬೆ ಅವರನ್ನು ಗೌರವಾರ್ಪಣೆಯೊಂದಿಗೆ ಸನ್ಮಾನಿಸಲಾಯಿತು ಹಾಗೂ ಶ್ರೀ ದುರ್ಗಾ ಮಕ್ಕಳ ಮೇಳದ ಕಲಿಕೆಯ ಸದಸ್ಯರಾಗಿದ್ದುಕೊಂಡು ಕಳೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಫಲಿತಾಂಶ ದಾಖಲಿಸಿದ ಮನು ಕಾಶ್ಯಪ್, ವಿಶ್ವನಾಥ ಹಾಗೂ ಹೃಷಿಕೇಶ್ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಆದಿತ್ಯ ಭಟ್ ಮುಚ್ಚೂರು ಇವರುಗಳಿಗೆ ಪ್ರೋತ್ಸಾಹಧನ ಸಹಿತ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಸ್ಪೀಕರ್ ಯೋಗೀಶ್ ಭಟ್, ಉದಯ ಬಿ.ಸುವರ್ಣ ಸಸಿಹಿತ್ಲು, ಕಟೀಲು ತಾ.ಪಂ. ಸದಸ್ಯ ಸುಕುಮಾರ್ ಸನೀಲ್, ಕಟೀಲು ಗ್ರಾ.ಪಂ ಅಧ್ಯಕ್ಷ ಗೀತಾ ಸುವರ್ಣ, ಗ್ರಾ.ಪಂ ಉಪಾಧ್ಯಕ್ಷ ಕಿರಣ್ ಶೆಟ್ಟಿ, ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ, ಉದ್ಯಮಿಗಳಾದ ಸಂದೀಪ್ ಶೆಟ್ಟಿ ಮರವೂರು, ರಾಮಣ್ಣ ಶೆಟ್ಟಿ, ಜಯರಾಮ್ ಶೆಟ್ಟಿ, ಐಕಳ ಮಹಾಬಲ ಶೆಟ್ಟಿ, ಡಾ| ನರೇಶ್ ರಾವ್ ಬರಾಟೆ, ಶ್ರೀಧರ್ ಶೆಟ್ಟಿ ಮಣಿಲ, ಸುಬ್ರಹ್ಮಣ್ಯ ಆಚಾರ್ ಶಿಬರೂರು, ರಾಜೀವ್ ಕೈಕಂಬ ಮುಂತಾದವರು ಉಪಸ್ಥಿತರಿದ್ದರು.

ಶ್ರೀ ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಶ್ರೀ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ, ಅಭಿನಂದನಾ ಭಾಷಣ ಗೈದರು. ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ದಯಾನಂದ ಮಾಡ, ರಾಜೇಶ್ ಐ, ಕೃಷ್ಣ ಕೆ. ಸಹಕರಿಸಿದರು.

By Suddi9

Leave a Reply

Your email address will not be published. Required fields are marked *