ಬಜಪೆ: ‘ಯಕ್ಷಗಾನ ಕೇವಲ ಮನರಂಜನೆಗೆ ಸೀಮಿತವಾಗಿಲ್ಲ ಬದಲಾಗಿ ನಾಡಿನ ಸಂಸ್ಕೃತಿ, ಸಂಸ್ಕಾರ, ಭಾಷೆ, ಸಾಹಿತ್ಯ, ಸಂಗೀತ, ಲಲಿತಕಲೆಗಳ ಸಮಗ್ರತೆಯ ಸಾಕಾರ ಸ್ವರೂಪ. ಇಂತಹ ಪ್ರಕಾರದಲ್ಲಿ ಮಕ್ಕಳನ್ನು ಎಳೆಯಿಂದಲೇ ತೊಡಗಿಸಿಕೊಂಡಾಗ ವ್ಯಕ್ತಿತ್ವ ವೃದ್ಧಿಯ ಜತೆಗೆ ಅವರು ಮೌಲ್ಯಯುತ ಜೀವನ ನಡೆಸಲು ಪೂರಕವಾಗುವುದು. ಕರಾವಳಿಯಾದ್ಯಂತ ಸಾವಿರಾರು ಮಕ್ಕಳು ಯಕ್ಷಗಾನ ಕಲೆಯ ಕಲಿಕೆಯಲ್ಲಿ ತೊಡಗಿರುವುದು ಒಂದು ಸಕಾರಾತ್ಮಕ ಬೆಳವಣೆಗೆ ಅದರಲ್ಲೂ ಕಟೀಲು ದುರ್ಗಾ ಮಕ್ಕಳ ಮೇಳದ ಕೊಡುಗೆ ಅನನ್ಯ’ ಎಂದು ಮಾಜಿ ಸಚಿವ -ಶಾಸಕ ಕೆ.ಅಭಯಚಂದ್ರ ಜೈನ್ ಅವರು ಹೇಳಿದರು.

17vm-yaksha

ಅವರು ಭಾನುವಾರ ರಾತ್ರಿ ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಸರಸ್ವತೀ ಸದನದಲ್ಲಿ ಜರಗಿದ ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ಅಷ್ಟಮ ವಾರ್ಷಿಕ  ಕಲಾಪರ್ವದ ಸಮಾರೋಪ ಸಮಾರಂಭದಲ್ಲಿ ಕಟೀಲು ಮೇಳದ ಹಿರಿಯ ಭಾಗವತ ಕುಬಣೂರು ಶ್ರೀಧರ್ ರಾವ್ ಅವರಿಗೆ ‘ಕಟೀಲು ಸದಾನಂದ ಅಸ್ರಣ್ಣ ಪ್ರಶಸ್ತಿ’ಯನ್ನು ಪ್ರಧಾನ ಮಾಡಿ ಮಾತನಾಡಿದರು.

ಯಕ್ಷಗಾನ ಕಲಾವಿದ ಕಟೀಲು ಮುರಳೀಧರ ರಾವ್ ಹಾಗೂ ಅಂತರಾಷ್ಟ್ರೀಯ  ಕ್ರೀಡಾಪಟು   ಹಾಗೂ ಚಲನಚಿತ್ರ ಹಾಗೂ ಕಿರುತೆರೆ ಕಲಾವಿದ ರೋಹಿತ್ ಕುಮಾರ್ ಕಟೀಲು ಅವರನ್ನು ಸನ್ಮಾನಿಸಿ ಗೌರವಾಸಲಾಯಿತು.

ದೇವಳದ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ ಆಶೀರ್ವಚನವಿತ್ತರು. ಅನುವಂಶಿಕ ಮೋಕ್ತೇಸರ ಕೊಡೆತ್ತೂರುಗುತ್ತು ಡಾ.ಕೆ.ರವೀಂದ್ರನಾಥ ಪೂಂಜಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ದುರ್ಗಾ ಮಕ್ಕಳ ಮೇಳದಲ್ಲಿ ಯಕ್ಷಶಿಕ್ಷಣ ಪಡೆಯುತ್ತಿರುವ ಹಾಗೂ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ಗಣ್ಯರು ವಿತರಿಸಿದರು.

ಚಲನಚಿತ್ರ ನಿರ್ಮಾಪಕ ಜ್ಯೋತಿ ಕೃಷ್ಣ ನಾಯ್ಡು, ಬಜಪೆ ವ್ಯವಸಾಯ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರತ್ನಕಾರ ಶೆಟ್ಟಿ ಉದ್ಯಮಿಗಳಾದ ಎಂ.ಜಿ.ಕರ್ಕೇರಾ, ಪ್ರದೀಪ್ ಕುಮಾರ್ ಪಾಲೆಮಾರ್ ಸಂದೇಶ್ ಶೆಟ್ಟಿ, ಪಿ.ಸುಬ್ರಹ್ಮಣ್ಯ ಭಟ್, ಅಶೋಕ್ ಕುಮಾರ್, ನೀತೀಶ್ ಶೆಟ್ಟಿಗಾರ್, ಪ್ರದ್ಯುಮ್ನರಾವ್, ಪ್ರೇಮನಾಥ ಮಾರ್ಲ, ಪದ್ಮನಾಭ ಶೆಟ್ಟಿ ಕಾವೂರು,  ಆಶಾ ವೇಣು ಗೋಪಾಲ್ ಶೇಟ್ ಮುಂತಾದವರು ಉಪಸ್ಥಿತರಿದ್ದರು.

ದುರ್ಗಾ ಮಕ್ಕಳ ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿ ಭಾಷಣಗೈದರು. ಮಕ್ಕಳ ಮೇಳದ ಭಾಗವತ ದೇವಿಪ್ರಕಾಶ್ ರಾವ್ ಮತ್ತು ಬಳಗ ಸಮ್ಮಾನ ಪತ್ರದ ಗಾಯನ ಹಾಗೂ ಕಲಾವಿದ ವಾದಿರಾಜ ಕಲ್ಲೂರಾಯ ವಾಚನಗೈದರು ಮೇಳದ ಕಾರ್ಯದರ್ಶಿ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಟ್ರ್ರಸ್ಟಿಗಳಾದ ರಾಘವೇಂದ್ರ ಆಚಾರ್, ಪಶುಪತಿ ಶಾಸ್ತ್ರಿ, ದಯಾನಂದ ಮಾಡ, ರಾಜೇಶ್ ಐ, ಕೃಷ್ಣ ಕೆ ಅವರುಗಳು ಕಾರ್ಯಕ್ರಮ ಸಂಯೋಜನೆಗೆ ಸಹಕರಿಸಿದರು.  ಸಭಾ ಪರ್ವದ ಬಳಿಕ ಶ್ರೀ ದುರ್ಗಾ ಮಕ್ಕಳ ಮೇಳದ ಕಲಾವಿದರಿಂದ ‘ಶ್ರೀ ರಾಮ ದರ್ಶನ’ ಯಕ್ಷಗಾನ ಬಯಾಲಾಟ ಪ್ರದರ್ಶನಗೊಂಡಿತು.

By Suddi9

Leave a Reply

Your email address will not be published. Required fields are marked *