ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ 5ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರು ಸುಸಜ್ಜಿತವಾದ ಅನ್ನಛತ್ರಕ್ಕೆ ಶಿಲಾನ್ಯಾಸ ಕಾರ್ಯಕ್ರಮವು ಆ.21ರಂದು ಶುಕ್ರವಾರ ನೆರವೇರಿತು.

ಶ್ರೀ ರಾಜರಾಜೇಶ್ವರೀ ದೇವಸ್ಥಾನದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ,ವೆಂಕಟೇಶ್ ತಂತ್ರಿಗಳ ಉಪಸ್ಥಿತಿಯಲ್ಲಿ ದೇವಳದ ಪ್ರ.ಧಾನ ಅರ್ಚಕರಾದ , ಕೆ. ರಾಮ್ ಭಟ್, ಪರಮೇಶ್ವರ ಭಟ್ , ಅನಂತಪದ್ಮನಾಭ ಭಟ್, ಶ್ರೀಕಾಂತ್ ಮಯ್ಯ ಪೂಜಾ ವಿಧಿ ವಿದಾನಗಳನ್ನು ನೆರವೇರಿಸಿದರು.

ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಅನುವಂಶಿಕ ಮೊಕ್ತೇಸರ ಮಾಧವ ಭಟ್, ಪೊಳಲಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಚೈತನ್ಯಾನಂದ ಸ್ವಾಮೀಜಿ,ಮಾಜಿ ಸಚಿವ ಬಿ.ರಮಾನಾಥ ರೈ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ನಿರ್ಮಿತ್ ಕೇಂದ್ರದ ಇಂಜಿನಿಯರ್ ನವೀನ್, ದೇವಳದ ಇಂಜಿನಿಯರ್ ಲಕ್ಷ್ಮಣ್ ಪೂಜಾರಿ , ಮುಗರೋಡಿ ಕನ್ಸ್ತ್ರಕ್ಷನ್ ಸುಧಾಕರ ಶೆಟ್ಟಿ, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೋಹನ್

, ಕ್ರಷ್ಣಕುಮಾರ್ ಪೂಂಜ, ಕೃಷ್ಣರಾಜ್ ಮಾರ್ಲ, ವಿದ್ಯಾಚರಣ್ಭಂಡಾರಿ, ಗಣೇಶ್ ಶೆಟ್ಟಿ ಪರಾರಿ, ಜೀವರಾಜ್ ಶೆಟ್ಟಿ , ಶಿವಪ್ರಸಾದ್ ಶೆಟ್ಟಿ, ಕುಮಾರ್ ಆಳ್ವ, ಸೋಮಶೇಖರ್ ಶೆಟ್ಟಿ, ದೇವ್ ದಾಸ್ ಹೆಗ್ಡೆ, ಚಂದ್ರಶೇಖರ್ ಭಂಡಾರಿ, ವೆಂಕಟೇಶ ನಾವಡ ಪೊಳಲಿ, ಚಂದ್ರಹಾಸ ಪಲ್ಲಿಪಾಡಿ, ಸುಕೇಶ್ ಚೌಟ, ಭಾಸ್ಕರ್ ಭಟ್, ಸುಬ್ರಾಯ ಕಾರಂತ ಮತ್ತಿತರರು ಇದ್ದರು.

