ಬಂಟ್ವಾಳ: ಇಲ್ಲಿನ ಜಕ್ರಿಬೆಟ್ಟು ವಿನಲ್ಲಿ ನಡೆಯಲಿರುವ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ ಸಭೆಯು ಶುಕ್ರವಾರ ಬಂಟ್ವಾಳದಲ್ಲಿ ನಡೆಯಿತು. 


ಸಮಿತಿಯ ಗೌರವಾಧ್ಯಕ್ಷರಾದ  ಬಿ. ರಮಾನಾಥ ರೈ ಹಾಗೂ ಅಧ್ಯಕ್ಷರಾದ  ಬಿ. ಪದ್ಮಶೇಖರ್ ಜೈನ್ ಅವರ ಉಪಸ್ಥಿತಿಯಲ್ಲಿ ಗಣೇಶೋತ್ಸವದ ಸಿದ್ಧತೆಗಳು ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು.
ಸಾರ್ವಜನಿಕರ ಸಹಕಾರ ಹಾಗೂ ಸೌಹಾರ್ದತೆಯೊಂದಿಗೆ ಶ್ರೀ ಗಣೇಶೋತ್ಸವವನ್ನು ಯಶಸ್ವಿಯಾಗಿ ಹಾಗೂ ಭಕ್ತಿಭಾವದಿಂದ ಆಚರಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಯಿತು.

By Suddi9

Leave a Reply

Your email address will not be published. Required fields are marked *