ಬಂಟ್ವಾಳ: ದೈಹಿಕ ಶಿಕ್ಷಣ ಶಿಕ್ಷಕರಾಗಿ, ಯೋಗ ಶಿಕ್ಷಕರಾಗಿ, ಭಾರತ್ ಸ್ಕೌಟ್ಸ್ ನ  ತರಬೇತುದಾರರಾಗಿ, ಜಿಲ್ಲಾಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿತ್ತಿರುವ ಪ್ರತಿಮ್ ಕೆ.ಎಸ್. ರವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

 

ಯೋಗ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅನೇಕ ವಿದ್ಯಾರ್ಥಿಗಳನ್ನು ತಯಾರುಗೊಳಿಸಿರುವ ಇವರು  ಯೋಗಶಿಕ್ಷಕರು ಆಗಿದ್ದಾರೆ. ಸ್ಕೌಟಿಂಗಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ತರಬೇತಿ ನೀಡಿರುವುದಲ್ಲದೆ ಕೊರೊನ ಸಂದರ್ಭದಲ್ಲಿ ತಮ್ಮ ಅವಿರತವಾದ ಸೇವೆಯನ್ನು ಸಲ್ಲಿಸಿದ್ದಾರೆ.  ಇವರಿಗೆ ಯುನೈಟೆಡ್ ಅಮೆರಿಕ ವಿಶ್ವವಿದ್ಯಾನಿಲಯ ಪಾಂಡಿಚೇರಿಯಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಲಾಗಿದೆ.  ಬಂಟ್ವಾಳ ತಾಲೂಕಿನ ಸಂಚಯಗಿರಿ ನಿವಾಸಿಯಾಗಿದ್ದು  ದುಗ್ಗಪ್ಪ ಹಾಗೂ ಶಶಿಕಲಾ ಇವರ ಪುತ್ರರಾಗಿದ್ದಾರೆ.  

By Suddi9

Leave a Reply

Your email address will not be published. Required fields are marked *