ಬಂಟ್ವಾಳ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ವೀರಕಂಭ ವತಿಯಿಂದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರ  ಹಾಗೂ ವೀರಕಂಭ ಶ್ರೀ ಶಾರದಾ ಭಜನಾ ಮಂದಿರದ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮ  ಶುಕ್ರವಾರ ವೀರಕಂಭ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಜರಗಿತು.   

ಈ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ  ಶ್ರೀರಾಮ ಶಿಶು ಮಂದಿರದ ಮುಖ್ಯ ಶಿಕ್ಷಕಿ ಶಾಂತ ಲಕ್ಷ್ಮಿ ಅವರು ವರಮಹಾಲಕ್ಷ್ಮಿ  ಪೂಜಾ ಮಹೋತ್ಸವ ಹಾಗೂ ರಕ್ಷಾಬಂಧನದ ಮಹತ್ವದ ಬಗ್ಗೆ  ಉಪನ್ಯಾಸ ನೀಡಿದರು. ಪೂಜಾ ಸಮಿತಿಯ ಅಧ್ಯಕ್ಷ ಸೌಮ್ಯ ವೇಣುಗೋಪಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಡಾ ಪ್ರಭಾಕರ್ ಭಟ್ ಹಾಗೂ ಕಮಲ ಪ್ರಭಾಕರ್ ಭಟ್ ಉಪಸ್ಥಿತರಿದ್ದರು. 

ಶಾಂಭವಿ ಆಚಾರ್ಯ, ಕೋಮಲಾಕ್ಷಿ, ವೇದಾವತಿ  ಪ್ರಾರ್ಥಿಸಿ, ಪೂಜಾ ಸ್ವಾಗತಿಸಿ,ಕುಸುಮ ಶೆಟ್ಟಿ ವಂದಿಸಿದರು. ಪ್ರೇಮ ನಾಗೇಶ್ ಆಚಾರ್ಯ  ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *