ಜಮ್ಮು ಮತ್ತು ಕಾಶ್ಮೀರ: ಭಾರತ ಸರ್ಜಿಕಲ್ ದಾಳಿ ನಡೆಸಿದ ತರುವಾಯು ಉಗ್ರರು ಮತ್ತೆ ತಮ್ಮ ಹಳೆಯ ಚಾಳೀ ಮುಂದುವರಿಸಿದ್ದು, ಬಾರಮುಲ್ಲ ಜಿಲ್ಲೆಯ ಸೇನಾ ಶಿಬಿರದ ಮೇಲೆ ದಾಳಿ ನಡೆಸಿದ ಪರಿಣಾಮ ಇಬ್ಬರು ಗಡಿ ಭದ್ರತಾ ಪಡೆಯ ಯೋಧರು ಗಾಯಗೊಂಡಿದ್ದಾರೆ.
ಸುಮಾರು ಜನರು ಗುಂಪಿದ್ದ ಉಗ್ರರು 46 ರಾಷ್ಟ್ರೀಯ ರೈಫಲ್ ಶಿಬಿರದ ಮೇಲೆ ಏಕಏಕಿ ದಾಳಿ ನಡೆಸಿದ್ದಾರೆ. ತಕ್ಷಣ ಯೋಧರು ಸಹ ಉಗ್ರರತ್ತ ಗುಂಡಿನ ಮಳೆ ಸುರಿಸಿದ್ದಾರೆ. ಎರಡೂ ಕಡೆ ಗುಂಡಿನ ದಾಳಿ ಮುಂದುವರೆದಿತ್ತು. ಮೂಲಗಳ ಪ್ರಕಾರ ಉಗ್ರರು ಸೇನಾ ಶಿಬಿರದ ಬಳಿ ಬಂದಿದ್ದಾರೆ ಎನ್ನಲಾಗಿದೆ.

